ರಾಜಸ್ಥಾನ: ಸಚಿವ ಸಂಪುಟ ಪುನಾರಚನೆಯಿಂದ ಸಚಿನ್ ಪೈಲಟ್ ಫುಲ್ ಖುಷ್!
ರಾಜಸ್ಥಾನದಲ್ಲಿ ತಿಂಗಳ ಕಾಲ ನಡೆದ ಗೊಂದಲದ ನಡುವೆ ಇಂದು ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ ಮಾಡಲಿದೆ. ಇದೇ ವೇಳೆ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸುದ್ದಿಗೋಷ್ಠಿ ನಡೆಸಿ ಸಚಿವ ಸಂಪುಟದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
Published: 21st November 2021 12:44 PM | Last Updated: 21st November 2021 12:47 PM | A+A A-

ಸಚಿನ್ ಪೈಲಟ್
ರಾಜಸ್ಥಾನ: ರಾಜಸ್ಥಾನದಲ್ಲಿ ತಿಂಗಳ ಕಾಲ ನಡೆದ ಗೊಂದಲದ ನಡುವೆ ಇಂದು ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ ಮಾಡಲಿದೆ. ಇದೇ ವೇಳೆ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸುದ್ದಿಗೋಷ್ಠಿ ನಡೆಸಿ ಸಚಿವ ಸಂಪುಟದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನೂತನ ಸಚಿವ ಸಂಪುಟ ಪಟ್ಟಿಯಿಂದ ಜನರಿಗೆ ಉತ್ತಮ ಸಂದೇಶ ರವಾನೆಯಾಗಿದೆ. ಪಕ್ಷದಲ್ಲಿ ಕೆಲವು ಲೋಪದೋಷಗಳಿದ್ದು, ಅವುಗಳನ್ನು ಭರ್ತಿ ಮಾಡಲಾಗಿದೆ. ಸಚಿವ ಸಂಪುಟ ಪುನಾರಚನೆಗೊಂಡಿದ್ದಕ್ಕೆ ಸೋನಿಯಾ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ಅಜಯ್ ಮಾಕನ್ ಅವರಿಗೆ ಪೈಲಟ್ ಧನ್ಯವಾದ ತಿಳಿಸಿದರು.
ಇದನ್ನೂ ಓದಿ: ರಾಜಸ್ಥಾನ ನೂತನ ಸಂಪುಟದಲ್ಲಿ 12 ಹೊಸ ಮುಖಗಳು, ಸಚಿನ್ ಪೈಲಟ್ ಬಣದಿಂದ ಐವರು ಸಚಿವರಾಗುವ ಸಾಧ್ಯತೆ
ದಲಿತ ಸಮಾಜದ ನಾಲ್ವರು ಕ್ಯಾಬಿನೆಟ್ ಮಂತ್ರಿಗಳನ್ನು ಮಾಡಿರುವುದು ತುಂಬಾ ಒಳ್ಳೆಯದಾಗಿದೆ. ಆದಿವಾಸಿ ಜನಾಂಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆ. ಎಲ್ಲರ ಒಪ್ಪಿಗೆ ಪಡೆದು ನೂತನ ಸಚಿವ ಸಂಪುಟ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ದೆಹಲಿ ಮತ್ತು ರಾಜಸ್ಥಾನದ ನಾಯಕರು ಒಟ್ಟಾಗಿ ಸೇರಿ ಹೊಸ ಸಚಿವ ಸಂಪುಟವನ್ನು ಸಿದ್ಧಪಡಿಸಿದ್ದಾರೆ ಅಂತಾ ಪೈಲಟ್ ತಿಳಿಸಿದರು.
ಪೈಲಟ್ ಬಣ ಅಶೋಕ್ ಬಣದಿಂದ ಮಂತ್ರಿಯಾಗಿದ್ದಾರೆ ಅಂತಾ ಹೇಳಲಾಗುತ್ತಿದೆ. ಆದರೆ, ರಾಜಸ್ಥಾನದ ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ. 2018ರಲ್ಲಿ ನಾವು ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದ್ದೇವೆ. ಹಾಗಾಗಿಯೇ ಕಾಂಗ್ರೆಸ್ ನಲ್ಲಿ ಒಂದೇ ಬಣ ಮತ್ತು ಅದು ಕಾಂಗ್ರೆಸ್ ಹೈಕಮಾಂಡ್ ನ ಬಣ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಚಿಸುವುದು ನಮ್ಮ ಗುರಿ. ಕಾಂಗ್ರೆಸ್ ನಲ್ಲಿ ಯಾವಾಗಲೂ ಸಾಮೂಹಿಕ ನಾಯಕತ್ವದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಅಂತಾ ಪೈಲಟ್ ಹೇಳಿದರು.