ಉತ್ತರಪ್ರದೇಶ: ಜೂನ್‌ನಲ್ಲಿ ಸಾವನ್ನಪ್ಪಿದ 80 ವರ್ಷದ ವ್ಯಕ್ತಿಗೆ ಈಗ '2ನೇ ಡೋಸ್' ಕೋವಿಡ್ ಲಸಿಕೆ!

ಇಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ತಿಂಗಳ ನಂತರ, ನವೆಂಬರ್ 16ರಂದು ಅವರಿಗೆ ಕೋವಿಡ್-19 ಲಸಿಕೆ ಎರಡನೇ ಡೋಸ್ ನೀಡಲಾಗಿದೆ ಎಂದು ಅವರ ಕುಟುಂಬಕ್ಕೆ ಎಸ್ಎಂಎಸ್ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿದ್ದಾರ್ಥನಗರ(ಉತ್ತರಪ್ರದೇಶ): ಇಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ತಿಂಗಳ ನಂತರ, ನವೆಂಬರ್ 16ರಂದು ಅವರಿಗೆ ಕೋವಿಡ್-19 ಲಸಿಕೆ ಎರಡನೇ ಡೋಸ್ ನೀಡಲಾಗಿದೆ ಎಂದು ಅವರ ಕುಟುಂಬಕ್ಕೆ ಎಸ್ಎಂಎಸ್ ಬಂದಿದೆ.

ಮೃತ ಸತ್ಯನಾರಾಯಣ್ ಸಿಂಗ್ ಅವರ ಮೊಮ್ಮಗ ಅಂಕುರ್ ಸಿಂಗ್ ಅವರು ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ತನಗಾದ ಸಂಕಷ್ಟವನ್ನು ವಿವರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಎಸ್ಎಂಎಸ್ ಅನ್ನು ಉಲ್ಲೇಖಿಸಿದ ಅಂಕುರ್ ಸಿಂಗ್, ಲೋಟಾನ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ಮಾಡಲಾಗಿದೆ. ಸಹಾಯಕಿ ನರ್ಸ್ ಹೆಸರು ಗುಧಿಯಾ ಎಂದು ಹೇಳಿದರು.

ಏಪ್ರಿಲ್ 4ರಂದು ಅವರ ಅಜ್ಜ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದರು. ಲಸಿಕೆ ಸಮಯದಲ್ಲಿ ಅವರ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲಾಗಿತ್ತು ಎಂದು ಅಂಕುರ್ ಹೇಳಿದರು.

ಆದಾಗ್ಯೂ, ಸತ್ಯನಾರಾಯಣ್ ಸಿಂಗ್ ಜೂನ್ 10ರಂದು ನಿಧನರಾಗಿದ್ದರು. ಕುಟುಂಬಕ್ಕೆ ಜುಲೈ 3ರಂದು ಮರಣ ಪ್ರಮಾಣಪತ್ರವನ್ನು ನೀಡಲಾಯಿತು ಎಂದು ಅಂಕುರ್ ಸಿಂಗ್ ಹೇಳಿದರು.

ಸಿದ್ಧಾರ್ಥನಗರದ ಮುಖ್ಯ ವೈದ್ಯಾಧಿಕಾರಿ ಡಾ.ಸಂದೀಪ್ ಚೌಧರಿ ಅವರನ್ನು ಸಂಪರ್ಕಿಸಿದಾಗ ಅವರು ವಿಷಯದ ಬಗ್ಗೆ ಗಮನಹರಿಸಿದ್ದಾರೆ.

ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ತಾಂತ್ರಿಕ ದೋಷ ಕಂಡುಬಂದಲ್ಲಿ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರು ಸಿದ್ಧಾರ್ಥನಗರದ ಬನ್ಸಿ ಮೂಲದವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com