ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆ: ಗೌತಮ್ ಗಂಭೀರ್ ನಿವಾಸದ ಹೊರಗಡೆ ಬಿಗಿ ಭದ್ರತೆ 

ಭಾರತೀಯ ಜನತಾ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಐಸಿಸ್ ಕಾಶ್ಮೀರದಿಂದ ಈ ಬೆದರಿಕೆ ಹಾಕಲಾಗಿದೆ ಅಂತಾ ಗೌತಮ್ ಗಂಭೀರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಐಸಿಸ್ ಕಾಶ್ಮೀರದಿಂದ ಈ ಬೆದರಿಕೆ ಹಾಕಲಾಗಿದೆ ಅಂತಾ ಗೌತಮ್ ಗಂಭೀರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಜಿ ಕ್ರಿಕೆಟಿಗನ ದೂರು ಬಂದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಅವರ ಕುಟುಂಬಕ್ಕೆ ರಕ್ಷಣೆ ನೀಡಲಾಗಿದ್ದು, ಮನೆಗೆ ಭದ್ರತೆ ಒದಗಿಸಲಾಗಿದೆ ಎಂದು ಕೇಂದ್ರೀಯ ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ. 

ಐಸಿಸ್ ಕಾಶ್ಮೀರ ಎಂಬ ಹೆಸರಿನಲ್ಲಿ ಫೋನ್ ಮತ್ತು ಇ-ಮೇಲ್ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಅಂತಾ ಆರೋಪಿಸಿ ಗೌತಮ್ ಗಂಭೀರ್ ದೂರು ದಾಖಲಿಸಿದ್ದರು. ಪೊಲೀಸರು ಮುಂದಿನ ತನಿಖೆಯನ್ನು ಆರಂಭಿಸಿದ್ದು, ಮತ್ತಷ್ಟು ವಿವರ ತಿಳಿದುಬರಬೇಕಾಗಿದೆ. 

 ಪೂರ್ವ ದೆಹಲಿ ಕ್ಷೇತ್ರದಿಂದ ಗೌತಮ್ ಗಂಭೀರ್ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸತ್ ಸದಸ್ಯರಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸಮನ್ ಆಗಿದ್ದ ಅವರು, ಇದೀಗ ರಾಜಕೀಯದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com