ದೇಶದಲ್ಲಿಯೇ ಮೊದಲು: 8ವರ್ಷದ ಬಾಲಕಿ ಮೇಲೆ ರೇಪ್; ಒಂದೇ ದಿನದಲ್ಲಿ ಅತ್ಯಾಚಾರಿಗೆ ಶಿಕ್ಷೆ ಪ್ರಕಟಿಸಿದ ಬಿಹಾರ ಕೋರ್ಟ್

ಬಿಹಾರದ ಅರಾರಿಯಾ ಪೋಕ್ಸೊ ನ್ಯಾಯಾಲಯವು ಒಂದೇ ದಿನದಲ್ಲಿಅತ್ಯಾಚಾರ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ್ದಲ್ಲದೇ ಅಪರಾಧಿಗೆ ಶಿಕ್ಷೆ, ದಂಡವನ್ನು ವಿಧಿಸಿದೆ. 
ಕೋರ್ಟ್ (ಸಾಂಕೇತಿಕ ಚಿತ್ರ)
ಕೋರ್ಟ್ (ಸಾಂಕೇತಿಕ ಚಿತ್ರ)

ಪಾಟ್ನಾ: ಬಿಹಾರದ ಅರಾರಿಯಾ ಪೋಕ್ಸೊ ನ್ಯಾಯಾಲಯವು ಒಂದೇ ದಿನದಲ್ಲಿಅತ್ಯಾಚಾರ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ್ದಲ್ಲದೇ ಅಪರಾಧಿಗೆ ಶಿಕ್ಷೆ, ದಂಡವನ್ನು ವಿಧಿಸಿದೆ. 

ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಂತ ವೇಗವಾಗಿ ವಿಚಾರಣೆಯನ್ನು ನಡೆಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದ ಮೊದಲ ನ್ಯಾಯಾಲಯ​ ಎಂಬ ದಾಖಲೆಯನ್ನು ನಿರ್ಮಿಸಿದೆ.

ಪೋಕ್ಸೊ ನ್ಯಾಯಾಲಯವು ಸಾಕ್ಷಿಗಳು, ವಾದ ಮತ್ತು ಪ್ರತಿವಾದಗಳನ್ನು ದಾಖಲಿಸುವ ಮೂಲಕ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಟ್ರ್ಯಾಕ್ ಮಾಡಿತು. ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ, ಕೇವಲ ಒಂದು ದಿನದಲ್ಲಿ ತನ್ನ ತೀರ್ಪನ್ನು ಹೊರಡಿಸಿತು. ದೇಶದ ಯಾವುದೇ ಪೋಕ್ಸೊ ನ್ಯಾಯಾಲಯದ ಇಷ್ಟು ವೇಗವಾಗಿ ತೀರ್ಪನ್ನು ನೀಡಿಲ್ಲ.

ನ್ಯಾಯಾಲಯದ ತೀರ್ಪು ಅಕ್ಟೋಬರ್ 4, 2021 ರಂದು ಬಂದಿದ್ದು, ನವೆಂಬರ್ 26 ರಂದು ಆರ್ಡರ್ ಶೀಟ್ ಲಭ್ಯವಾದಾಗ ಈ ವಿಷಯವು ಹೊರ ಜಗತ್ತಿಗೆ ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com