ಮುಂಬೈನಲ್ಲಿ ಬಿಕೆಯು ರ್ಯಾಲಿ: ಪ್ರತಿಭಟನೆಯಲ್ಲಿ ಸಾವನ್ನಪ್ಪಿದ 700ಕ್ಕೂ ಹೆಚ್ಚು ರೈತರಿಗೆ ಗೌರವ ಸಮರ್ಪಣೆ
ಅಕ್ಟೋಬರ್ 3 ರಂದು ನಡೆದ ಲಖೀಂಪುರ ಖೇರಿ ಘಟನೆಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮವನ್ನು ತಂದು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ಸಹ ಯೋಜಿಸಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
Published: 28th November 2021 12:06 PM | Last Updated: 28th November 2021 12:06 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ನೂತನ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ 700ಕ್ಕೂ ಹೆಚ್ಚು ರೈತರ ತ್ಯಾಗ, ಪರಿಶ್ರಮ, ಸ್ಮರಿಸಿ ಗೌರವ ಸಲ್ಲಿಸಲು ಮಹಾರಾಷ್ಟ್ರದ ಮುಂಬೈನ ಆಜಾದ್ ಮೈದಾನದಲ್ಲಿ ಇಂದು ಭಾನುವಾರ ಸಾವಿರಾರು ರೈತರು ರ್ಯಾಲಿ ನಡೆಸಲಿದ್ದಾರೆ.
ಇದನ್ನು ಓದಿ: ರೈತರ ಪ್ರತಿಭಟನೆ: ಸಂಸತ್ ಗೆ ನ.29 ರ ಟ್ರ್ಯಾಕ್ಟರ್ ಜಾಥ ರದ್ದುಗೊಳಿಸಿದ ಎಸ್ ಕೆಎಂ
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಆಯೋಜಿಸಲಾದ ರ್ಯಾಲಿಯಲ್ಲಿ 50,000ಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆಯಿದೆ. ಇನ್ನು ಅಕ್ಟೋಬರ್ 3 ರಂದು ನಡೆದ ಲಖೀಂಪುರ ಖೇರಿ ಘಟನೆಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮವನ್ನು ತಂದು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ಸಹ ಯೋಜಿಸಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಇದನ್ನು ಓದಿ: ಎಂಎಸ್ ಪಿ ಕುರಿತು ಸಿಹಿಸುದ್ದಿ: ರೈತರ ಮತ್ತೊಂದು ಬೇಡಿಕೆಗೆ ಅಸ್ತು ಎಂದ ಕೇಂದ್ರ ಸರ್ಕಾರ!
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ರೈತರು 'ಕಿಸಾನ್ ಮಜ್ದೂರ್ ಮಹಾಪಂಚಾಯತ್' ಅನ್ನು ಸಹ ಯೋಜಿಸಿದ್ದಾರೆ.
ಅಲ್ಲಿ ಅವರು ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಎಲ್ಲ ಕೃಷಿ ಸಂಬಂಧಿತ ಸಮಸ್ಯೆಗಳು, ಸ್ವಾಮಿನಾಥನ್ ವರದಿ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳು ಸೇರಿದಂತೆ ಇತರೆ ತಮ್ಮ ಬೇಡಿಕೆಗಳನ್ನು ಕೂಡ ಚರ್ಚಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ದುಪ್ಪಟ್ಟು; ಕೆಜಿಗೆ 785 ರೂ!