ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೆ ಜೀವಬೆದರಿಕೆ, ಪಾಕ್ ನಿಂದ 3ನೇ ಇ-ಮೇಲ್

ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್​ ಗಂಭೀರ್ ಗೆ ಮತ್ತೆ ಜೀವಬೆದರಿಕೆ ಸಂದೇಶ ಬಂದಿದ್ದು, ಪಾಕಿಸ್ತಾನದ ಕರಾಚಿಯಿಂದ ಮೂರನೇ ಬಾರಿಗೆ ಬೆದರಿಕೆ ಇ-ಮೇಲ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್​ ಗಂಭೀರ್ ಗೆ ಮತ್ತೆ ಜೀವಬೆದರಿಕೆ ಸಂದೇಶ ಬಂದಿದ್ದು, ಪಾಕಿಸ್ತಾನದ ಕರಾಚಿಯಿಂದ ಮೂರನೇ ಬಾರಿಗೆ ಬೆದರಿಕೆ ಇ-ಮೇಲ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ್ ಮಾತ್ರವಲ್ಲದೇ ಅವರ ಕುಟುಂಬಸ್ಥರಿಗೂ ಬೆದರಿಕೆ ಹಾಕಲಾಗಿದೆ. ಪಾಕಿಸ್ತಾನದಿಂದ ಈ ಬೆದರಿಕೆ ಇ-ಮೇಲ್ ಬಂದಿದ್ದು, ಇದು ಗೌತಮ್ ಗಂಭೀರ್ ಗೆ ಬಂದ ಮೂರನೇ ಬೆದರಿಕೆ ಇ-ಮೇಲ್ ಆಗಿದೆ. ಅಂತೆಯೇ ಕರಾಚಿಯಿಂದ ಮೊದಲ ಬೆದರಿಕೆ ಇಮೇಲ್ ಅಗಿದೆ.

ಐಸಿಸ್ ಕಾಶ್ಮೀರ್​ ಎಂಬ ಇಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಅದರಲ್ಲಿ ದೆಹಲಿ ಪೊಲೀಸ್​ ಮತ್ತು ಕೇಂದ್ರ ದೆಹಲಿ ಡಿಸಿಪಿ ಶ್ವೇತಾ ಚೌಹ್ವಾಣ್ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ. ನಿಮ್ಮಿಂದ ಮತ್ತು ನಿಮ್ಮ ಭದ್ರತಾ ಪಡೆಗಳಿಂದ ನಮ್ಮನ್ನೇನೂ ಮಾಡಲಾಗುವುದಿಲ್ಲ ಎಂದು ದುಷ್ಕರ್ಮಿಗಳು ಸವಾಲು ಹಾಕಿದ್ದಾರೆ. ಈ ಸಂದೇಶ ಭಾನುವಾರ ಮಧ್ಯರಾತ್ರಿ 1:37ರ ಸುಮಾರಿಗೆ isiskasmir@yahoo.com ಎಂಬ ಇಮೇಲ್​ನಿಂದ ಬಂದಿದೆ. 

ನವೆಂಬರ್​ 24ರ ಬೆಳಿಗ್ಗೆ ಗೌತಮ್​ ಗಂಭೀರ್​ ಅವರ ಅಧಿಕೃತ ಇಮೇಲ್​ ಐಡಿಗೆ, ಗಂಭೀರ್‌ ಕುಟುಂಬವನ್ನು ಹತ್ಯೆ ಮಾಡುವ ಬೆದರಿಕೆ ಸಂದೇಶ ಬಂದಿತ್ತು. ನಂತರ ಅವರ ಪಿಎ ಗೌರವ್​ ಅರೋರ ಡಿಸಿಪಿ ಚೌಹ್ವಾಣ್​ಗೆ ಎಫ್​ಐಆರ್ ದಾಖಲಿಸಲು ಮತ್ತು ಹೆಚ್ಚಿನ ಭದ್ರತೆ ಒದಗಿಸಲು ಪತ್ರ ಬರೆದಿದ್ದರು.ಆದರೆ, ಅದೇ ದಿನ ಸಂಜೆ ಐಸಿಸ್‌ನಿಂದ ಮತ್ತೊಂದು ಬೆದರಿಕೆ ಇಮೇಲ್​ ಸಂದೇಶ ಬಂದಿದೆ. 

ಇದರಲ್ಲಿ ಗಂಭೀರ್​ಗೆ ರಾಜಕೀಯದಿಂದ ದೂರ ಉಳಿಯಲು ಮತ್ತು ಕಾಶ್ಮೀರ ಸಂಬಂಧಿತ ವಿಷಯಗಳ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡುವ ಜೊತೆಗೆ, ಗಂಭೀರ್​ ಮನೆಯ ವಿಡಿಯೋವೊಂದನ್ನು ಕಳುಹಿಸಲಾಗಿತ್ತು. ಸೆಂಟ್ರಲ್ ಡಿಸ್ಟ್ರಿಕ್ಟ್ ಪೊಲೀಸರ ಸೈಬರ್ ಸೆಲ್ ತಂಡ, ಈ ಇಮೇಲ್ ಪಾಕಿಸ್ತಾನದ ಕರಾಚಿ ಮೂಲದ ವ್ಯಕ್ತಿಯೊಬ್ಬರು ಕಳುಹಿಸಿದ್ದಾರೆ ಎಂದು ಖಚಿತಪಡಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com