ಕಳೆದ 200 ವರ್ಷಗಳಲ್ಲಿ ಚೆನ್ನೈಯಲ್ಲಿ ಈ ವರ್ಷ ಅತಿಹೆಚ್ಚು ಮಳೆ: ಸಾಮಾನ್ಯ ಜನರ ಜೀವನ ಅಸ್ತವ್ಯಸ್ತ
ಮಹಾನಗರಿ ಚೆನ್ನೈಯಲ್ಲಿ ಕೆಲ ದಿನಗಳ ಹಿಂದೆ ಪ್ರವಾಹ ರೀತಿಯಲ್ಲಿ ಮಳೆ ಸುರಿದು ಅನಾಹುತ ಸಂಭವಿಸಿದ್ದನ್ನು ಜನರು ನೋಡಿದ್ದಾರೆ. ನಿನ್ನೆ ಮತ್ತೆ ಚೆನ್ನೈಯಲ್ಲಿ ಮೋಡ ಕವಿದ ವಾತಾವರಣ ಕಂಡು ಜನ ಭೀತರಾಗಿದ್ದರು. ಚೆನ್ನೈಯಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಯ ರೀತಿ ಮಹಾನಗರಿ ಮಳೆ ಕಂಡಿದ್ದು 200 ವರ್ಷಗಳ ಹಿಂದೆಯಂತೆ!
Published: 28th November 2021 09:10 AM | Last Updated: 28th November 2021 09:25 AM | A+A A-

ತಂಬರಂನ ಮುದಿಚುರ್ ನಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ
ಚೆನ್ನೈ: ಮಹಾನಗರಿ ಚೆನ್ನೈಯಲ್ಲಿ ಈ ವರ್ಷ ಮಹಾಮಳೆ ಸುರಿದು ಪ್ರವಾಹ ಉಂಟಾಗಿ ಅನಾಹುತ ಸಂಭವಿಸಿದ್ದನ್ನು ಜನರು ನೋಡಿದ್ದಾರೆ. ನಿನ್ನೆ ಮತ್ತೆ ಚೆನ್ನೈಯಲ್ಲಿ ಮೋಡ ಕವಿದ ವಾತಾವರಣ ಕಂಡು ಜನ ಭೀತರಾಗಿದ್ದರು. ಚೆನ್ನೈಯಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಯ ರೀತಿ ಮಹಾನಗರಿ ಮಳೆ ಕಂಡಿದ್ದು 200 ವರ್ಷಗಳ ಹಿಂದೆಯಂತೆ!
ಚೆನ್ನೈ ಮಳೆಯ ತೀವ್ರತೆ ಎಷ್ಟಿತ್ತೆಂದರೆ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಟಿ ನಗರ, ಉಸ್ಮಾನ್ ರಸ್ತೆಗಳಲ್ಲಿ ಮಳೆ ಅವ್ಯಾಹತವಾಗಿ ನೀರು ತುಂಬಿಕೊಂಡಿತು. ವಲಚೆರಿಯಲ್ಲಿ ನಾರಾಯಣಂ ಪುರಂ ಕೆರೆ ನೀರು ತುಂಬಿ ಹರಿದುಹೋಗುತ್ತಿತ್ತು. ಸಮ್ಮಂಚೆರಿ ಕೆರೆ ಸಂಪೂರ್ಣವಾಗಿ ಆವರಿಸಿದೆ.
ಟಿ ನಗರದಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಚಂದ್ರಮೌಳಿ, ನೀರು ತುಂಬಿಕೊಂಡಿದ್ದರಿಂದ ನಾನು ವಾಸವಿದ್ದ ಹಾಸ್ಟೆಲ್ ತೊರೆದು ಬೇರೆ ಕಡೆಗೆ ಹೋಗಬೇಕಾಗಿ ಬಂತು. ನಾವು ಈಗ ಸಂಬಂಧಿಕರ ಮನೆಗೆ ಹೋಗುತ್ತಿದ್ದು ಇಲ್ಲಿ ಸಂಬಂಧಿಕರು ಇಲ್ಲದಿರುವ ನನ್ನ ಸ್ನೇಹಿತರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೇನೆ. ಇಲ್ಲಿಗೆ ಕ್ಯಾಬ್, ಆಟೋ ಬರುವುದಿಲ್ಲ, ಬಸ್ ನಲ್ಲಿ ಹೋಗಲು ನಾವು ನಡೆದುಕೊಂಡು ಹೋಗಬೇಕು ಎಂದು ತಮ್ಮ ಹಾಸ್ಟೆಲ್ ನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ವೆಲಚೇರಿಯಲ್ಲಿ, ಎಜಿಎಸ್ ಕಾಲೋನಿಯ ನಿವಾಸಿಗಳು ಮೂರು ಅಡಿ ಆಳದ ನೀರಿನಿಂದ ಆವೃತವಾಗಿದ್ದು, ಹಿರಿಯ ನಾಗರಿಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಎಜಿಎಸ್ ಕಾಲೋನಿ ನಿವಾಸಿಗಳ ಕಲ್ಯಾಣ ಸಂಘದ ಜಂಟಿ ಕಾರ್ಯದರ್ಶಿ ಎಂ ಸುಧಾ ತಿಳಿಸಿದ್ದಾರೆ. "ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಸಹ, ನಾವು ಹೊರಬರಲು ಸಾಧ್ಯವಿಲ್ಲ ಏಕೆಂದರೆ ಇದು ಕೇವಲ ಮಳೆನೀರಲ್ಲ, ಒಳಚರಂಡಿ ನೀರು ಕೂಡ ಮಿಶ್ರವಾಗಿದೆ. ವಾಸನೆಯಿಂದಾಗಿ ನಾವು ನಮ್ಮ ಕೋಣೆಗಳಲ್ಲಿ ಕುಳಿತುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ನೊಂದು ಹೇಳುತ್ತಾರೆ. ಮತ್ತೋರ್ವ ನಿವಾಸಿ ಎಸ್ ಗುಣಶೇಖರನ್, ವೀರಂಗಲ್ ಒಡೆಯನಲ್ಲಿರುವ ಒಂದೇ ವಿಲೇವಾರಿ ಸ್ಥಳವು ನೀರನ್ನು ಹೊರಹಾಕಲು ಸಾಕಾಗುವುದಿಲ್ಲ ಎಂದು ಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.
ಚೆನ್ನೈ ಮಳೆ ಜನಜೀವನದ ಪರಿಣಾಮ ಬೀರಿದೆ. ಮರೀನಾ ಬೀಚ್‌ನ ಮಾರಾಟಗಾರ ಶೇಖರನ್ ಕೆ, ಅನೇಕ ಅಂಗಡಿಗಳಿಗೆ ನೀರು ನುಗ್ಗಿ ಸರಕುಗಳಿಗೆ ಹಾನಿಯಾಗಿದೆ. "ನಾವು ಈಗಾಗಲೇ ಮಳೆಯಿಂದಾಗಿ ನಮ್ಮ ವ್ಯಾಪಾರವನ್ನು ಕಳೆದುಕೊಂಡಿದ್ದೇವೆ ಎಂದರು.
Tamil Nadu: Heavy rainfall lashes Rameshwaram; Red alert issued for the coastal districts of the State
— ANI (@ANI) November 28, 2021
A Low-Pressure Area is likely to form over the south Andaman Sea around 29th November, says IMD pic.twitter.com/6hihXPV910