The New Indian Express
ವಿಜಯವಾಡ: ಕೌಟುಂಬಿಕ ಕಲಹ ಓರ್ವ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ಮೃತ ವ್ಯಕ್ತಿಯ ಹೆಸರು ಚಿಟ್ಟಿಪೋತುಲ ನಾಗರಾಜು ಎಂದು ತಿಳಿದುಬಂದಿದೆ. ಆತ ತನ್ನ ತಮ್ಮನಿಂದಲೇ ಹತ್ಯೆಗೀಡಾಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ಆಸ್ತಿಗಾಗಿ ತಮ್ಮನಿಂದಲೇ ಅಕ್ಕನಿಗೆ ಸುಪಾರಿ: 7 ತಿಂಗಳ ಹಿಂದಿನ ಹತ್ಯೆ ರಹಸ್ಯ ಬಯಲು ಮಾಡಿದ ಪೊಲೀಸರು!
ನಾಗರಾಜು ಕುಡಿದುಕೊಂಡು ಮನೆಗೆ ಬಂದು ಕ್ಷುಲ್ಲಕ ವಿಚಾರಕ್ಕೆ ಕ್ಯಾತೆ ತೆಗೆದಿದ್ದ. ನಿರುದ್ಯೋಗಿಯಾಗಿದ್ದ ನಾಗರಾಜು ತನ್ನ ಖರ್ಚಿಗೆ ತಂದೆಯಲ್ಲಿ ಹಣ ಕೇಳಿದ್ದ ಎನ್ನಲಾಗಿದೆ. ಜಗಳ ತಾರಕಕ್ಕೇರಿದಾಗ ಮಾತಿಗೆ ಮಾತು ಬೆಳೆದಾಗ ಕೋಪದಿಂದ ನಾಗರಾಜು ತಂದೆಯ ಕಪಾಳಕ್ಕೆ ಹೊಡೆದಿದ್ದ.
ಇದನ್ನೂ ಓದಿ: ಮುಂಬೈನ ಕುರ್ಲಾ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ!
ತಂದೆಯ ಕಪಾಳಕ್ಕೆ ನಾಗರಾಜು ಬಾರಿಸಿದ್ದನ್ನು ಕಂಡ ತಮ್ಮ ಸುರೇಶ್ ಅಣ್ಣನ ಮೇಲೆ ದಾಳಿ ನಡೆಸಿದ್ದ. ದಾಳಿಯಿಂದ ತೀವ್ರವಾಗಿ ಗಾಯಗೊಂದ ನಾಗರಾಜು ಮೃತಪಟ್ಟಿದ್ದಾನೆ. ಆರೋಪಿ, ಸಹೋದರ ಸುರೇಶ್ ತಲೆಮರೆಸಿಕೊಂಡಿದ್ದು ಆತನ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ರೈಲ್ವೆ ಟ್ರಾಕ್ ಬಳಿ ಟಾಲಿವುಡ್ ಗಾಯಕಿ ತಂದೆಯ ಶವ ಪತ್ತೆ, ಬೆಂಗಳೂರು ಪೊಲೀಸರಿಂದ ಹತ್ಯೆ ಪ್ರಕರಣ ದಾಖಲು