ನವೆಂಬರ್ 23 ರವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹ ಶೇ. 68 ರಷ್ಟು ಹೆಚ್ಚಳ

ಏಪ್ರಿಲ್ 1 ರಿಂದ ನವೆಂಬರ್ 23 ರವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ಶೇ.  68 ರಷ್ಟು ವೃದ್ಧಿಯಾಗಿದ್ದು, 6.92 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಏಪ್ರಿಲ್ 1 ರಿಂದ ನವೆಂಬರ್ 23 ರವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ಶೇ.  68 ರಷ್ಟು ವೃದ್ಧಿಯಾಗಿದ್ದು, 6.92 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ತಿಳಿಸಿದ್ದಾರೆ.

2019-20 ಮತ್ತು 2020-21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ಶೇ. 27.29 ರಷ್ಟು ಹೆಚ್ಚಾಗಿದೆ.  6,92,833. 6 ಕೋಟಿ ಸಂಗ್ರಹದೊಂದಿಗೆ ಶೇ. 67. 93 ರಷ್ಟು ಬೆಳವಣಿಗೆಯನ್ನು ತೋರಿಸುತ್ತಿದೆ ಎಂದು ಲೋಕಸಭೆಯಲ್ಲಿ ಲಿಖಿತ ಹೇಳಿಕೆಯಲ್ಲಿಅವರು ಹೇಳಿದ್ದಾರೆ. 

2020-21ನೇ ಹಣಕಾಸು ವರ್ಷದಲ್ಲಿ ರೂ. 4. 12 ಲಕ್ಷ ಕೋಟಿ ಸಂಗ್ರಹ ಆಗಿತ್ತು. 2019-20ನೇ ಹಣಕಾಸು ವರ್ಷದಲ್ಲಿ ರೂ. 5.44 ಕೋಟಿ ಇತ್ತು. ಪ್ರಸಕ್ತ ಹಣಕಾಸು ವರ್ಷದ ನವೆಂಬರ್ 23ರವರೆಗೆ ನೇರ ತೆರಿಗೆ ಸಂಗ್ರಹವು  ರೂ.8.15 ಲಕ್ಷ ಕೋಟಿಗಳಷ್ಟಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 48.11 ರಷ್ಟು ಏರಿಕೆ ಕಂಡುಬಂದಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ಅವಧಿಯಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಏರಿಕೆಯಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com