
ಸಾಂದರ್ಭಿಕ ಚಿತ್ರ
ಕೊಯಮತ್ತೂರು: ರೈಲಿಗೆ ಸಿಕ್ಕಿ ಆನೆಗಳು ಮೃತಪಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ- ತಮಿಳುನಾಡು ಅರಣ್ಯಾಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಪರಿಹಾರ ಕಂಡುಕೊಂಡಿದ್ದಾರೆ. ಕಾಂಜಿಕ್ಕೋಡ್ ಮತ್ತು ಮದುಕ್ಕರೈ ರೈಲುಮಾರ್ಗದಲ್ಲಿ ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿಯನ್ನು ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ವೇಗವಾಗಿ ಬಂದು ರೈಲು ಡಿಕ್ಕಿ: ಹಳಿ ದಾಟುತ್ತಿದ್ದ ಹೆಣ್ಣಾನೆ ಮತ್ತದರ ಎರಡು ಮರಿಗಳ ದಾರುಣ ಸಾವು
ರೈಲ್ವೇ ಹಳಿಗಳಿಗೆ ಬೇಲಿ ಹಾಕುವುದರಿಂದ ಆನೆಗಳನ್ನು ರೈಲ್ವೇ ಹಳಿಯಿಂದ ದೂರವಿಡಬಹುದು ಎನ್ನುವುದು ಕರ್ನಾಟಕದ ನಾಗರಹೊಳೆಯಲ್ಲಿನ ರೈಲು ಬೇಲಿಯನ್ನು ಕೇರಳ ಅರಣ್ಯಾಧಿಕಾರಿಗಳು ಉದಾಹರಿಸಿದ್ದಾರೆ.
ಇದನ್ನೂ ಓದಿ: ಅಪ್ಪು ಮುದ್ದಾಡಿದ್ದ ಆನೆ ಮರಿಗೆ ಪುನೀತ್ ಹೆಸರು: ಅಗಲಿದ ನಟನಿಗೆ ಅರಣ್ಯ ಇಲಾಖೆಯಿಂದ ವಿಶೇಷ ಗೌರವ
ಸುಮಾರು 25 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಈ ಮಾರ್ಗದಲ್ಲಿ ರಾತ್ರಿಯ ರೈಲುಪ್ರಯಾಣವನ್ನು ನಿರ್ಬಂಧಿಸುವುದೇ ಪರಿಹಾರ ಎನ್ನುವುದನ್ನು ಪರಿಸರಪ್ರೇಮಿಗಳು ಪುನರುಚ್ಛರಿಸಿದ್ದಾರೆ.
ಇದನ್ನೂ ಓದಿ: ಆನೆಗಳನ್ನು ಆತಂಕವಾದಿಯಂತೆ ಬಿಂಬಿಸಬೇಡಿ: ಹಿಂದಿ ಮಾಧ್ಯಮಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆ ಸೂಚನೆ