ಭಾರತದ ಪ್ರಯಾಣಿಕರಿಗೆ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ- ಕೇಂದ್ರ ಸರ್ಕಾರ
ಭಾರತದಿಂದ ಬರುವ ಪ್ರಯಾಣಿಕರ ಮೇಲೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಕೇರಳ ಹೈಕೋರ್ಟ್ ಗೆ ತಿಳಿಸಿದೆ.
Published: 29th November 2021 03:17 PM | Last Updated: 29th November 2021 03:17 PM | A+A A-

ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಭಾರತದಿಂದ ಬರುವ ಪ್ರಯಾಣಿಕರ ಮೇಲೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಕೇರಳ ಹೈಕೋರ್ಟ್ ಗೆ ತಿಳಿಸಿದೆ.
ಗಲ್ಫ್ ರಾಷ್ಟ್ರಕ್ಕೆ ಕೆಲಸಕ್ಕಾಗಿ ಮರಳಲು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಮೂರನೇ ಡೋಸ್ ಲಸಿಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ವೇಳೆಯಲ್ಲಿ ಕೇಂದ್ರ ಸರ್ಕಾರ ಈ ರೀತಿಯಲ್ಲಿ ಮಾಹಿತಿ ನೀಡಿದೆ.
ಅರ್ಜಿದಾರ ವ್ಯಕ್ತಿ ಎರಡು ಡೋಸ್ ಕೋವಾಕ್ಸಿನ್ ಲಸಿಕೆ ಪಡೆದಿದ್ದರೂ ಆರಂಭದಲ್ಲಿ ಸೌದಿ ಅರೇಬಿಯಾದಿಂದ ಮಾನ್ಯತೆಯಾಗಿರಲಿಲ್ಲ. ಆದ್ದರಿಂದ ಅವರು, ಕೋವಿಶೀಲ್ಡ್ ನಂತರ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಮೂರನೇ ಲಸಿಕೆ ಹಾಕುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು.
ಭಾರತದಿಂದ ಬರುವ ಪ್ರಯಾಣಿಕರ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಸೌದಿ ಅರೇಬಿಯಾ ಹಿಂಪಡೆದಿದ್ದು, ಈ ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಕೇರಳ ಹೈಕೋರ್ಟ್ ಗೆ ತಿಳಿಸಿದರು. ಇದರ ಆಧಾರದ ಮೇಲೆ ನ್ಯಾಯಾಲಯವನ್ನು ಅರ್ಜಿಯನ್ನು ವಿಲೇವಾರಿಗೊಳಿಸಿತು.