ಕೋವಿಡ್-19 ಲಸಿಕೆ ಅಭಿಯಾನಕ್ಕೆ ಶೀಘ್ರವೇ ಝೈಕೋವ್-ಡಿ ಸೇರ್ಪಡೆ

ಝೈಡಸ್ ಕ್ಯಾಡಿಲಾ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸೂಜಿ ರಹಿತ ಝೈಕೋವ್-ಡಿ ಕೋವಿಡ್ -19 ಲಸಿಕೆಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಕೊರೋನಾ ನಿಗ್ರಹ ಲಸಿಕೆ ಅಭಿಯಾನಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. 
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ನವದೆಹಲಿ: ಝೈಡಸ್ ಕ್ಯಾಡಿಲಾ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸೂಜಿ ರಹಿತ ಝೈಕೋವ್-ಡಿ ಕೋವಿಡ್ -19 ಲಸಿಕೆಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಕೊರೋನಾ ನಿಗ್ರಹ ಲಸಿಕೆ ಅಭಿಯಾನಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. 

ಈಗಿರುವ ಲಸಿಕೆಗಳಿಗಿಂತಲೂ ಝೈಡಸ್ ಕ್ಯಾಡಿಲಾದ ನಳಿಕೆ ರಹಿತ ಕೋವಿಡ್-19 ಲಸಿಕೆಯ ಬೆಲೆ ವ್ಯತ್ಯಾಸವಿರಲಿದೆ.

ಬೆಲೆ ನಿಗದಿ ವಿಷಯದ ಬಗ್ಗೆ ಸರ್ಕಾರ ಲಸಿಕೆ ತಯಾರಕರ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಇದು ಮೂರು ಡೋಸ್ ಗಳ ಲಸಿಕೆಯಾಗಿದ್ದು, ಸೂಜಿ ರಹಿತ ಲಸಿಕೆಯಾಗಿರುವುದರಿಂದ  ಈಗಿರುವ ಲಸಿಕೆಗಳ ಬೆಲೆಗಿಂತಲೂ ಇದರ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಲಸಿಕೆಯನ್ನು ಶೀಘ್ರವೇ ಲಸಿಕೆ ಅಭಿಯಾನದ ಅಡಿಯಲ್ಲಿ ತರಲಾಗುವುದು ಎಂದು ಭೂಷಣ್ ಹೇಳಿದ್ದಾರೆ. ಝೈಕೋವ್ ಡಿ ಲಸಿಕೆಯನ್ನು 12 ವರ್ಷಗಳು ಹಾಗೂ ಮೇಲ್ಪಟ್ಟವರಿಗೆ ನೀಡಲಾಗುತ್ತದೆ.

ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ V ಲಸಿಕೆಗಳನ್ನು 18 ವರ್ಷಗಳ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಝೈಕೋವ್-ಡಿ ಜಗತ್ತಿನ ಮೊದಲ ಡಿಎನ್ಎ ಆಧಾರಿತ ಲಸಿಕೆಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com