ಪೂರ್ವ ಲಡಾಕ್ ನಲ್ಲಿ ಸದ್ಯ ಪರಿಸ್ಥಿತಿ ಸಾಮಾನ್ಯವಾಗಿದೆ, 13ನೇ ಸುತ್ತಿನ ಮಾತುಕತೆ ನಡೆಸಿ ಒಮ್ಮತಕ್ಕೆ ಬರುವ ನಿರೀಕ್ಷೆಯಿದೆ: ಸೇನಾ ಮುಖ್ಯಸ್ಥ ಜ.ನರವಣೆ 

ಕಳೆದ ಆರು ತಿಂಗಳಲ್ಲಿ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಅಕ್ಟೋಬರ್ 2ನೇ ವಾರದಲ್ಲಿ ಚೀನಾದೊಂದಿಗೆ 13ನೇ ಸುತ್ತಿನ ಮಾತುಕತೆ ಏರ್ಪಡುವ ನಿರೀಕ್ಷೆಯಿದೆ. ಸೇನೆಯ ಸಂಪೂರ್ಣ ಹಿಂತೆಗೆತಕ್ಕೆ ಸಹಮತ ಏರ್ಪಡುವ ಸಾಧ್ಯತೆಯಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ತಿಳಿಸಿದ್ದಾರೆ.
ಪೂರ್ವ ಲಡಾಕ್ ನಲ್ಲಿ ಸದ್ಯ ಪರಿಸ್ಥಿತಿ ಸಾಮಾನ್ಯವಾಗಿದೆ, 13ನೇ ಸುತ್ತಿನ ಮಾತುಕತೆ ನಡೆಸಿ ಒಮ್ಮತಕ್ಕೆ ಬರುವ ನಿರೀಕ್ಷೆಯಿದೆ: ಸೇನಾ ಮುಖ್ಯಸ್ಥ ಜ.ನರವಣೆ 

ಲೇಹ್: ಕಳೆದ ಆರು ತಿಂಗಳಲ್ಲಿ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಅಕ್ಟೋಬರ್ 2ನೇ ವಾರದಲ್ಲಿ ಚೀನಾದೊಂದಿಗೆ 13ನೇ ಸುತ್ತಿನ ಮಾತುಕತೆ ಏರ್ಪಡುವ ನಿರೀಕ್ಷೆಯಿದೆ. ಸೇನೆಯ ಸಂಪೂರ್ಣ ಹಿಂತೆಗೆತಕ್ಕೆ ಸಹಮತ ಏರ್ಪಡುವ ಸಾಧ್ಯತೆಯಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ತಿಳಿಸಿದ್ದಾರೆ.

ಪೂರ್ವ ಲಡಾಕ್ ನ ಗಡಿಯಲ್ಲಿ ಎಲ್ಲಾ ಚಲನವಲನಗಳನ್ನು ನಿಯಮಿತವಾಗಿ ಗಮನಿಸುತ್ತಿದ್ದೇವೆ. ನಮಗೆ ಸಿಗುವ ಮಾಹಿತಿಗಳ ಆಧಾರದ ಮೇಲೆ ಮೂಲಭೂತ ಸೌಕರ್ಯ ಮತ್ತು ಚೀನಾ ಸೇನೆಯ ಬೆದರಿಕೆಯನ್ನು ಎದುರಿಸಲು ಪಡೆಗಳಿಗೆ ಸಂಬಂಧಪಟ್ಟಂತೆ ಹೊಂದಾಣಿಕೆಯ ಅಭಿವೃದ್ಧಿಗಳನ್ನು ನಡೆಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಲ್ಲಿ ಬೆದರಿಕೆಯನ್ನು ಎದುರಾಳಿಗಳು ನೀಡಿದರೆ ಸಮರ್ಥವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಚೀನಿಯರು ಪೂರ್ವ ಲಡಾಖ್ ಮತ್ತು ಉತ್ತರ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜನೆಗೊಂಡಿದ್ದಾರೆ. ಖಂಡಿತವಾಗಿ, ಮುಂದಿನ ಪ್ರದೇಶಗಳಲ್ಲಿ ಅವರ ನಿಯೋಜನೆಯಲ್ಲಿ ಹೆಚ್ಚಳ ಕಂಡುಬಂದಿದೆ, ಇದು ನಮಗೆ ಕಳವಳ, ಆತಂಕದ ವಿಚಾರವಾಗಿದೆ ಎಂದಿದ್ದಾರೆ.

13ನೇ ಸುತ್ತಿನ ಮಾತುಕತೆ: ಈ ತಿಂಗಳ ಮಧ್ಯಭಾಗದಲ್ಲಿ 13ನೇ ಸುತ್ತಿನ ಮಾತುಕತೆಯನ್ನು ಚೀನಾ ಸೇನೆಯೊಂದಿಗೆ ನಡೆಸುವ ಆಶಾವಾದದಲ್ಲಿದ್ದು, ಎಲ್ಲಾ ಘರ್ಷಣೆ ಕೇಂದ್ರಗಳಿಂದ ಸೇನೆಯನ್ನು ಹಿಂಪಡೆದು ಸಮಸ್ಯೆ ಬಗೆಹರಿಸುವ ವಿಶ್ವಾಸದಲ್ಲಿದ್ದೇವೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ನಾನು ದೃಢ ನಂಬಿಕೆ ಮತ್ತು ಅಭಿಪ್ರಾಯ ಹೊಂದಿದ್ದೇನೆ. ಉತ್ತಮ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಖಂಡಿತಾ ಇದೆ ಎಂದು ಸೇನಾ ಮುಖ್ಯಸ್ಥರು ಹೇಳುತ್ತಾರೆ.

ಭಾರತೀಯ ಸೇನೆಯು ಮೊದಲ ಕೆ 9-ವಜ್ರ ಸ್ವಯಂ ಚಾಲಿತ ಹೊವಿಟ್ಜರ್ ರೆಜಿಮೆಂಟ್ ಅನ್ನು ಲಡಾಖ್ ವಲಯದಲ್ಲಿ ಚೀನಾದೊಂದಿಗೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಿದೆ. ಶತ್ರು ಗುರಿಗಳನ್ನು ಸುಮಾರು 50 ಕಿಮೀವರೆಗೆ ದಾಟಬಲ್ಲದು.

ಭಾರತೀಯ ಸೇನೆಯು ಮೊದಲ ಕೆ 9-ವಜ್ರ ಸ್ವಯಂ ಚಾಲಿತ ಹೊವಿಟ್ಜರ್ ರೆಜಿಮೆಂಟ್ ಅನ್ನು ಲಡಾಖ್ ವಲಯದಲ್ಲಿ ಚೀನಾದೊಂದಿಗೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಿದೆ. ಈ ಬಂದೂಕು ಶತ್ರು ಗುರಿಗಳನ್ನು ಸುಮಾರು 50 ಕಿಮೀವರೆಗೆ ದಾಟಬಲ್ಲದು. ಈ ಬಂದೂಕುಗಳು ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡಬಹುದು, ಕ್ಷೇತ್ರ ಪ್ರಯೋಗಗಳು ಅತ್ಯಂತ ಯಶಸ್ವಿಯಾಗಿವೆ. ನಾವು ಈಗ ಸಂಪೂರ್ಣ ರೆಜಿಮೆಂಟ್ ಅನ್ನು ಸೇರಿಸಿದ್ದೇವೆ, ಇದು ಸೇನೆಗೆ ಹೆಚ್ಚಿನ ಬಲ ತರುತ್ತದೆ ಎಂದು ಸೇನಾ ಮುಖ್ಯಸ್ಥರು ಹೇಳಿದರು. 

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಕಳೆದ ಫೆಬ್ರವರಿಯಿಂದ ಜೂನ್ ಅಂತ್ಯದವರೆಗೆ ಪಾಕ್ ಸೇನೆಯಿಂದ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ. ಆದರೆ ನಂತರ ಹೆಚ್ಚಿನ ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, ಕದನ ವಿರಾಮ ಉಲ್ಲಂಘನೆಗಳಿಂದ ಬೆಂಬಲಿತವಾಗಿಲ್ಲ. ಕಳೆದ 10 ದಿನಗಳಲ್ಲಿ, 2 ಕದನ ವಿರಾಮ ಉಲ್ಲಂಘನೆಗಳಾಗಿವೆ.

ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಅವರು (ಪಾಕಿಸ್ತಾನ) ಬೆಂಬಲ ನೀಡಬಾರದು ಎಂದು ನಾವು ಪ್ರತಿ ವಾರ ನಡೆಯುವ ಹಾಟ್‌ಲೈನ್ ಸಂದೇಶಗಳು ಮತ್ತು ಡಿಜಿಎಂಒ ಮಟ್ಟದ ಮಾತುಕತೆಗಳ ಮೂಲಕ ತಿಳಿಸಿದ್ದೇವೆ ಎಂದರು.

ಅಫ್ಘಾನಿಸ್ತಾನ ಸ್ಥಿತಿಗತಿ: ನಾವು ನಿಯಮಿತವಾಗಿ ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಅದರ ಸಂಭವನೀಯ ಪರಿಣಾಮಗಳನ್ನು ಗಮನಿಸುತ್ತಿದ್ದೇವೆ. ಇದು ಯಾವ ರೂಪ ಪಡೆಯುತ್ತದೆ ಎಂದು ನಿಖರವಾಗಿ ಹೇಳಲು ಈಗಲೇ ಸಾಧ್ಯವಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com