ಅಕ್ಟೋಬರ್ 8ರಿಂದ ರಾಮೋಜಿ ಫಿಲ್ಮ್ ಸಿಟಿ ಪ್ರವಾಸಿಗರ ವೀಕ್ಷಣೆಗೆ ಆರಂಭ

ಕೋವಿಡ್ ನಿಂದಾಗಿ ಮುಚ್ಚಲ್ಪಟ್ಟಿದ್ದ ರಾಮೋಜಿ ಫಿಲ್ಮ್ ಸಿಟಿ ಅಕ್ಟೋಬರ್ 8 ರಿಂದ ಆರಂಭವಾಗಲಿದ್ದು, ಪ್ರವಾಸಿಗರು ಭೇಟಿ ನೀಡಬಹುದಾಗಿದೆ.
ರಾಮೋಜಿ ಫಿಲ್ಮ್ ಸಿಟಿ
ರಾಮೋಜಿ ಫಿಲ್ಮ್ ಸಿಟಿ

ಹೈದರಾಬಾದ್: ಕೋವಿಡ್ ನಿಂದಾಗಿ ಮುಚ್ಚಲ್ಪಟ್ಟಿದ್ದ ರಾಮೋಜಿ ಫಿಲ್ಮ್ ಸಿಟಿ ಅಕ್ಟೋಬರ್ 8 ರಿಂದ ಆರಂಭವಾಗಲಿದ್ದು, ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ಕೋವಿಡ್ -19 ಲಾಕ್‌ಡೌನ್‌ ತೆರವಿನ ನಂತರ ಉದ್ಯಮವು ಮತ್ತೆ ತೆರೆದುಕೊಂಡು, ರಾಮೋಜಿ ಫಿಲ್ಮ್ ಸಿಟಿ ಸುರಕ್ಷಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತದೆ.

ಮಲ್ಟಿ-ಕ್ಯೂಸಿನ್ ರೆಸ್ಟೋರೆಂಟ್‌ಗಳು, ಫುಡ್ ಕೋರ್ಟ್‌ಗಳು, ಬಾಹುಬಲಿ ಚಿತ್ರದ ಭವ್ಯವಾದ ಸೆಟ್‌ಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಐಷಾರಾಮಿ, ಸೌಕರ್ಯ, ಆರ್ಥಿಕತೆಯಿಂದ ಸೂಪರ್ ಎಕಾನಮಿವರೆಗೆ ಪ್ರತಿ ಬಜೆಟ್‌ಗೆ ಸರಿಹೊಂದುವಂತೆ ವೈವಿಧ್ಯಮಯ ವಾಸ್ತವ್ಯದ ಆಯ್ಕೆಗಳು ಲಭ್ಯವಿರುವ ಕಾರಣ ಪ್ರವಾಸಿಗರು ರಾಮೋಜಿ ಫಿಲ್ಮ್ ಸಿಟಿಯತ್ತ ರಾಜಾದಿನಗಳಲ್ಲಿ ಭೇಟಿ ನೀಡಲು ಬಯಸುತ್ತಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com