ಮುಂಬೈ ಕ್ರೂಸ್ ಶಿಪ್ ಮೇಲೆ ದಾಳಿ: ಬಾಲಿವುಡ್, ಶ್ರೀಮಂತ ಉದ್ಯಮಿಗಳು, ವಿದೇಶಿ ಪ್ರಜೆಗಳ ನಂಟಿನ ಜಾಲಾಡುತ್ತಿರುವ ಎನ್ ಸಿಬಿ 

ಹೈಪ್ರೊಫೈಲ್ ಡ್ರಗ್ ಕೇಸಿನ ರೀತಿಯಲ್ಲಿ ದೇಶಾದ್ಯಂತ ಸುದ್ದಿಯಾಗಿರುವ ಮುಂಬೈಯ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ತಂಡದ ಮೇಲೆ ಪ್ರಯಾಣಿಕರ ಸೋಗಿನಲ್ಲಿ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದಿದ್ದು ಅದರಲ್ಲಿ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸಿಕ್ಕಿಬಿದ್ದಿದ್ದು ಭಾರೀ ಸುದ್ದಿ ಪಡೆದಿದೆ.
ಎನ್ ಸಿಬಿ ಮುಖ್ಯಸ್ಥ ಎಸ್ ಎನ್ ಪ್ರಧಾನ್
ಎನ್ ಸಿಬಿ ಮುಖ್ಯಸ್ಥ ಎಸ್ ಎನ್ ಪ್ರಧಾನ್

ಮುಂಬೈ: ಹೈಪ್ರೊಫೈಲ್ ಡ್ರಗ್ ಕೇಸಿನ ರೀತಿಯಲ್ಲಿ ದೇಶಾದ್ಯಂತ ಸುದ್ದಿಯಾಗಿರುವ ಮುಂಬೈಯ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ತಂಡದ ಮೇಲೆ ಪ್ರಯಾಣಿಕರ ಸೋಗಿನಲ್ಲಿ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದಿದ್ದು ಅದರಲ್ಲಿ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸಿಕ್ಕಿಬಿದ್ದಿದ್ದು ಭಾರೀ ಸುದ್ದಿ ಪಡೆದಿದೆ.

ಕಳೆದ ರಾತ್ರಿ ಗಾಂಧಿ ಜಯಂತಿ ದಿನವೇ ಈ ದಾಳಿ ನಡೆದಿದ್ದು 8 ಮಂದಿಯನ್ನು ವಶಕ್ಕೆ ಪಡೆದಿರುವ ಎನ್ ಸಿಬಿ ಇಂದು ಅವರ ಹೆಸರುಗಳನ್ನು ಪ್ರಕಟಿಸಿದೆ. ಈ ಬಗ್ಗೆ ಎಎನ್ ಐ ಸುದ್ದಿಸಂಸ್ಥೆಗೆ ಎಳೆಎಳೆಯಾಗಿ ಬಿಚ್ಚಿಟ್ಟಿರುವ ಎನ್ ಸಿಬಿ ಮುಖ್ಯಸ್ಥ ಎಸ್ ಎನ್ ಪ್ರಧಾನ್, ಎಂಟು ಮಂದಿಯನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಹಲವು ಮಾದಕ ವಸ್ತುಗಳು ಸಿಕ್ಕಿವೆ. ಬಂಧಿತರಿಂದ ಇನ್ನಷ್ಟು ಮಾಹಿತಿ ಸಿಕ್ಕಿದ ಮೇಲೆ ಇನ್ನಷ್ಟು ದಾಳಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ನಿಸ್ಪಕ್ಷಪಾತ ತನಿಖೆ: ಈ ಪ್ರಕರಣದಲ್ಲಿ ನಾವು ನಿಸ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ವಿಚಾರಣೆ ಪ್ರಕ್ರಿಯೆಯಲ್ಲಿ ಬಾಲಿವುಡ್ ಅಥವಾ ಇತರ ಉದ್ಯಮಿಗಳು, ಶ್ರೀಮಂತರ ಹೆಸರುಗಳು ಹೊರಬಿದ್ದರೆ ಕಾನೂನು ಪ್ರಕಾರ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ, ಯಾರನ್ನೂ ಕಾನೂನಿನಿಂದ ನುಣುಚಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ವಾಣಿಜ್ಯ ನಗರಿ ಮುಂಬೈಯಲ್ಲಿ ರಾತ್ರಿ ಹೊತ್ತು ಝಗಮಗಿಸುವ ದೀಪದ ಬೆಳಕಿನಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿರುತ್ತದೆ. ರಾತ್ರಿಯಾಗುತ್ತಿದ್ದಂತೆ ರೇವ್ ಪಾರ್ಟಿ, ಆಲ್ಕೋಹಾಲ್ ಪಾರ್ಟಿಗಳು ನಡೆಯುವುದು ಸಾಮಾನ್ಯವಾಗಿದೆ. ದಾಖಲೆಗಳನ್ನು ನೋಡಿದರೆ ಕಳೆದೊಂದು ವರ್ಷದಲ್ಲಿ 300ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇದರಲ್ಲಿ ವಿದೇಶಿ ಪ್ರಜೆಗಳು, ಚಿತ್ರೋದ್ಯಮದವರು, ಶ್ರೀಮಂತರು ಭಾಗಿಯಾಗಿದ್ದಾರೆಯೇ ಎಂದು ಪತ್ತೆಹಚ್ಚುತ್ತೇವೆ ಎಂದು ಎನ್ ಸಿಬಿ ಮುಖ್ಯಸ್ಥರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com