ಬೀಟಿಂಗ್ ರೀಟ್ರೀಟ್: ಜಮ್ಮು ಸಮೀಪವೂ ವಾಘಾ ಗಡಿ ರೀತಿಯ ಬಿಎಸ್ಎಫ್ ಕವಾಯತು!

ಅಠಾರಿ-ವಾಘಾ ಗಡಿಯಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ಇನ್ನು ಮುಂದೆ ಜಮ್ಮು ಗಡಿಯಲ್ಲೂ ನಡೆಯಲಿದೆ.
ಅಕ್ಟೇರಿಯೊ ಸೇನಾ ಕವಾಯತು
ಅಕ್ಟೇರಿಯೊ ಸೇನಾ ಕವಾಯತು

ಜಮ್ಮು: ಅಠಾರಿ-ವಾಘಾ ಗಡಿಯಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ಇನ್ನು ಮುಂದೆ ಜಮ್ಮು ಗಡಿಯಲ್ಲೂ ನಡೆಯಲಿದೆ.

ಹೌದು.. ಜಮ್ಮುವಿನಿಂದ 35 ಕಿ.ಮೀ.ದೂರದ ಆರ್‌.ಎಸ್‌.ಪುರದ ಅಕ್ಟೇರಿಯೊ ಗಡಿ ಭಾಗದಲ್ಲಿ ಪಂಜಾಬ್‌ನ ವಾಘಾದ ಗಡಿಯಲ್ಲಿ ನಡೆಯುತ್ತಿರುವಂತಹ ಕವಾಯತು ಪ್ರದರ್ಶನ ಗಾಂಧಿ ಜಯಂತಿ ದಿನವಾದ ಶನಿವಾರದಿಂದ ಆರಂಭವಾಗಿದೆ.‌ ಸುಚೇತ್‌ಗಡ್ ಗ್ರಾಮದ ಸಮೀಪವಿರುವ ಈ ಗಡಿ ಭಾಗದಲ್ಲಿ ಬಿಎಸ್‌ಎಫ್‌  ಯೋಧರು ಧ್ವಜಾವರೋಹಣ (ಬೀಟ್‌ ದಿ ರಿಟ್ರೀಟ್‌) ನಡೆಸಿ ಕವಾಯತು ನಡಸಿದರು. ವಾಘಾ ಗಡಿಯಲ್ಲಿ ನಡೆಯುವ ರೀತಿಯಲ್ಲೇ ಇಲ್ಲೂ ಕವಾಯತು ನಡೆಯಿತು.

ಇನ್ನು ಈ ಕಾರ್ಯಕ್ರಮಕ್ಕೆ ಸ್ಥಳೀಯ ನೂರಾರು ನಿವಾಸಿಗಳು ಸಾಕ್ಷಿಯಾಗಿದ್ದರು. ಮುಂದಿನ ದಿನಗಳಲ್ಲಿ ವಾಘಾ ಗಡಿಯಂತೆಯೇ ಅಕ್ಟೇರಿಯೊ ಸೇನಾ ಕವಾಯತು ಕೂಡ ಸಹ ಜನಪ್ರಿಯ ಪ್ರವಾಸಿ ತಾಣವಾಗುವುದು ನಿಶ್ಚಿತ ಎಂದು ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

‘ಇದೊಂದು ಐತಿಹಾಸಿಕ ದಿನ. ಸಚೇತಗಡ ಜಮ್ಮು-ಕಾಶ್ಮೀರದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲಿ ಒಂದು ಪ್ರಮುಖ ಪ್ರವಾಸಿ ತಾಣವಾಗಲಿದೆ. ಈ ಹಂತ ತಲುಪಲು ನೆರವಾದ ಬಿಎಸ್‌ಎಫ್‌ ಮತ್ತು ಇತರ ಸಂಸ್ಥೆಗಳ ನೆರವು ಶ್ಲಾಘನೀಯ. ಇದು ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸಿದ ಒಂದು  ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅಭಿಪ್ರಾಯಪಟ್ಟರು. 

ರಿಟ್ರೀಟ್‌ ನಡೆದಿರುವ ಇದೊಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಬಿಎಸ್‌ಎಫ್‌ನ (ಜಮ್ಮು) ಡಿಐಜಿ ಪಿ ಎಸ್ ಸಂಧು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2016ರ ಜುಲೈ 4 ರಂದು ಅಕ್ಟೆರಿಯೊ ಗಡಿಯಲ್ಲಿ ಗಡಿ ಪ್ರವಾಸೋದ್ಯಮವನ್ನು ಆರಂಭಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com