ಆರ್ಯನ್ ಖಾನ್ ಚಾಟ್ ನಿಂದ ಅಂತಾರಾಷ್ಟ್ರೀಯ ಡ್ರಗ್ ಜಾಲದ ನಂಟು ಬಹಿರಂಗ: ಕೋರ್ಟ್ ಗೆ ಎನ್ ಸಿಬಿ

ಆರ್ಯನ್ ಖಾನ್ ಚಾಟ್ ನಿಂದ ಅಂತಾರಾಷ್ಟ್ರೀಯ ಡ್ರಗ್ ಜಾಲ ಬಹಿರಂಗವಾಗಿದೆ ಎಂದು ಕೋರ್ಟ್ ಗೆ ಎನ್ ಸಿಬಿ ಹೇಳಿದೆ. 
ಆರ್ಯನ್ ಖಾನ್
ಆರ್ಯನ್ ಖಾನ್

ಮುಂಬೈ: ಆರ್ಯನ್ ಖಾನ್ ಚಾಟ್ ನಿಂದ ಅಂತಾರಾಷ್ಟ್ರೀಯ ಡ್ರಗ್ ಜಾಲ ಬಹಿರಂಗವಾಗಿದೆ ಎಂದು ಕೋರ್ಟ್ ಗೆ ಎನ್ ಸಿಬಿ ಹೇಳಿದೆ. 

ಆರ್ಯನ್ ಖಾನ್ ವಾಟ್ಸ್ ಆಪ್ ಚಾಟ್ ನಿಂದ ಡ್ರಗ್ಸ್ ಗೆ ಸಂಬಂಧಿಸಿದಂತೆ ಆಘಾತಕಾರಿ ಹಾಗೂ ದೋಷಾರೋಪಣೆ ಮಾಡಬಹುದಾದ ಅಂಶಗಳು ಬಹಿರಂಗಗೊಂಡಿದೆ ಎಂದು ಎನ್ ಸಿಬಿ ಕೋರ್ಟ್ ಗೆ ತಿಳಿಸಿದೆ. 

ಅ.7 (ಗುರುವಾರದವರೆಗೂ) ಎನ್ ಸಿಬಿ ಆರ್ಯನ್ ಖಾನ್ ಹಾಗೂ ಇತರ 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕೋರ್ಟ್ ನಲ್ಲಿ ಆತನ ವಾಟ್ಸ್ ಆಪ್ ಚಾಟ್ ಗಳ ಮಾಹಿತಿಯನ್ನು ತನಿಖಾ ಸಂಸ್ಥೆ ಬಹಿರಂಗಗೊಳಿಸಿದೆ. 

ಪೇಮೆಂಟ್ ಮೋಡ್ ಹಾಗೂ ಡ್ರಗ್ಸ್ ಖರೀದಿಗಾಗಿ ಕೋಡ್ ವರ್ಡ್ ಗಳನ್ನು ಬಳಕೆ ಮಾಡಿರುವುದು ವಾಟ್ಸ್ ಆಪ್ ಚಾಟ್ ನಿಂದ ಬಯಲಾಗಿದೆ ಎಂದು ಎನ್ ಸಿಬಿ ಕೋರ್ಟ್ ಗೆ ಮಾಹಿತಿ ನೀಡಿದೆ. ಆದರೆ ಆರ್ಯನ್ ಖಾನ್ ಪರ ವಕೀಲರು ತಮ್ಮ ಕಕ್ಷಿದಾರರಿಂದ ಯಾವುದೇ ಡ್ರಗ್ಸ್ ನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ವಾದ ಮಂಡಿಸಿದರು. ವಾದ ಆಲಿಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನೆರ್ಲಿಕರ್ ಆರ್ಯನ್ ಖಾನ್ ಕಸ್ಟಡಿಯನ್ನು ಅ.7 ವರೆಗೂ ವಿಸ್ತರಣೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com