ವಾಹನಗಳ ವೇಗದ ಮಿತಿ ಏರಿಕೆಗೆ ಶೀಘ್ರ ನೀತಿ: ಗಡ್ಕರಿ

ದೇಶದ ರಸ್ತೆಗಳಲ್ಲಿ ವಾಹನಗಳ ವೇಗ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ಯೋಚಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ: ದೇಶದ ರಸ್ತೆಗಳಲ್ಲಿ ವಾಹನಗಳ ವೇಗ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ಯೋಚಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

ಇಂಡಿಯಾ ಟುಡೇ ಕಾನ್ಕ್ಲೇವ್ 2021 ರಲ್ಲಿ ಮಾತನಾಡಿದ ಸಚಿವರು, ಹೆಚ್ಚಿನ ವೇಗದಿಂದ ಅಪಘಾತಗಳು ಉಂಟಾಗುತ್ತವೆ ಎಂಬ ಗ್ರಹಿಕೆ ಇರುವುದರಿಂದ ಇನ್ನೂ ವೇಗದ ಮಿತಿಯನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದರು.

ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೇಗದ ಮಿತಿಯನ್ನು ನಿರ್ಬಂಧಿಸುವ ವಿವಿಧ ನ್ಯಾಯಾಲಯದ ನಿರ್ಧಾರಗಳಿವೆ. ಆದರೆ, ಈಗ ವೇಗದ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ನಿರ್ಧರಿಸಿದ್ದೇವೆ ಎಂದರು.

ಎಕ್ಸ್ ಪ್ರೆಸ್ ಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಪ್ರತಿ ಗಂಟೆಗೆ 140 ಕಿಲೋ ಮೀಟರ್ ಗೆ ಕಡಿಮೆಗೊಳಿಸಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ವಿವಿಧ ವರ್ಗಗಳ ವಾಹನಗಳ ವೇಗದ ಮಿತಿಯನ್ನು ಪರಿಷ್ಕರಿಸಿ ಶೀಘ್ರದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎದು ನಿತಿನ್ ಗಡ್ಕರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com