ಕಾಂಗ್ರೆಸ್ ನಲ್ಲಿ ಆಂತರಿಕ ಚುನಾವಣೆ: ಮುಂದಿನ ವಾರ ನಡೆಯಲಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಸಿಗಲಿದೆಯಾ ಉತ್ತರ!

ಕಾಂಗ್ರೆಸ್ ನಲ್ಲಿ ಆಂತರಿಕ ಚುನಾವಣೆ ವಿಷಯವಾಗಿ ಮುಂದಿನ ವಾರ ನಡೆಯಲಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. 
ಕಾಂಗ್ರೆಸ್ ಧ್ವಜದ ಚಿತ್ರ
ಕಾಂಗ್ರೆಸ್ ಧ್ವಜದ ಚಿತ್ರ

ನವದೆಹಲಿ: ಕಾಂಗ್ರೆಸ್ ನಲ್ಲಿ ಆಂತರಿಕ ಚುನಾವಣೆ ವಿಷಯವಾಗಿ ಮುಂದಿನ ವಾರ ನಡೆಯಲಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. 

ಜಿ-23 ಕಾಂಗ್ರೆಸ್ ನಾಯಕರು ಸಿಡಬ್ಲ್ಯುಸಿ ಸಭೆಯನ್ನು ನಡೆಸಲು ಒತ್ತಾಯಿಸುತ್ತಿದ್ದು, ಶೀಘ್ರವೇ ಕಾಂಗ್ರೆಸ್ ನಲ್ಲಿನ ಆಂತರಿಕ ಚುನಾವಣೆಯ ವಿಷಯ ನಿರ್ಣಾಯಕ ಹಂತ ತಲುಪಲಿದೆ. ಗೌಪ್ಯತೆಯ ಆಧಾರದಲ್ಲಿ ಪಕ್ಷದ ನಾಯಕರೊಬ್ಬರು ಈ ಬಗ್ಗೆ ಮಾತನಾಡಿದ್ದು, ಮುಂದಿನ ವಾರದಲ್ಲಿ ಸಿಡಬ್ಲ್ಯುಸಿ ಸಭೆಯನ್ನು ಕರೆಯಲಾಗಿದೆ ಹಾಗೂ ಅಜೆಂಡಾವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದ್ದಾರೆ. 

ಸಂಘಟನೆಗೆ ಸಂಬಂಧಿಸಿದ ಚುನಾವಣೆ ಹಾಗೂ ದೇಶದಲ್ಲಿ ನಡೆಯುತ್ತಿರುವ ಇನ್ನಿತರ ರಾಜಕೀಯ ಬೆಳವಣಿಗೆಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಸಿಡಬ್ಲ್ಯುಸಿ ಸಭೆಯಲ್ಲಿ ಮುಂಬರುವ ಪಂಚರಾಜ್ಯಗಳ ಚುನಾವಣೆಯ ಬಗ್ಗೆಯೂ ಚರ್ಚಿಸಲಾಗುತ್ತದೆ. ಆದರೆ ಆಂತರಿಕ ಚುನಾವಣೆಯ ವಿಷಯ ಪ್ರಾಮುಖ್ಯತೆ ಪಡೆಯಲಿದೆ ಎಂಬುದು ಪಕ್ಷದ ನಾಯಕರ ವಿಶ್ವಾಸವಾಗಿದೆ. ಕಾಂಗ್ರೆಸ್ ನಲ್ಲಿ ಗಾಂಧಿ ಪರಿವಾರದ ನಾಯಕತ್ವವನ್ನು ಪ್ರಶ್ನಿಸಿರುವ ಗ್ರೂಪ್-23 ನಾಯಕರು ಸಿಡಬ್ಲ್ಯುಸಿ ಸದಸ್ಯರ ಆಯ್ಕೆ, ಚುನಾವಣಾ ಸಮಿತಿ ಸದಸ್ಯರು, ಸಂಸದೀಯ ಮಂಡಳಿ ಚುನಾವಣೆಗೆ ಪಟ್ಟು ಹಿಡಿದಿದ್ದಾರೆ. 

ಜಿ-23 ಭಾಗವಾಗಿರುವ ಗುಲಾಮ್ ನಬಿ ಆಜಾದ್ ಇತ್ತೀಚೆಗೆ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಸಿಡಬ್ಲ್ಯುಸಿ ಸಭೆಗೆ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com