ರಂಜಿತ್ ಸಿಂಗ್ ಹತ್ಯೆ ಕೇಸಿನಲ್ಲಿ ಡೇರಾ ಸಚ್ಚಾ ಸೌಧದ ಗುರ್ಮೀತ್ ರಾಮ್ ರಹೀಂ ಸೇರಿ ಐವರು ಅಪರಾಧಿಗಳು: ಸಿಬಿಐ ನ್ಯಾಯಾಲಯ ತೀರ್ಪು

ಡೇರಾ ಸಚ್ಚಾ ಸೌದಾದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಹರ್ಯಾಣದ ಪಂಚ್ ಕುಲದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ.
ಗುರ್ಮೀತ್ ರಾಮ್ ರಹೀಂ
ಗುರ್ಮೀತ್ ರಾಮ್ ರಹೀಂ

ಪಂಚ್ ಕುಲ(ಹರ್ಯಾಣ): ಡೇರಾ ಸಚ್ಚಾ ಸೌದಾದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಹರ್ಯಾಣದ ಪಂಚ್ ಕುಲದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ.

ಶಿಕ್ಷೆಯ ಪ್ರಮಾಣ ಇದೇ 12ರಂದು ನ್ಯಾಯಾಲಯ ಪ್ರಕಟಿಸಲಿದೆ. ಡೇರಾ ಸಚ್ಚಾ ಸೌದಾದ ಆವರಣದಲ್ಲಿ 2002ರಲ್ಲಿ ರಂಜಿತ್ ಸಿಂಗ್ ಹತ್ಯೆಯಾಗಿತ್ತು.

ತಮ್ಮ ಇಬ್ಬರು ಮಹಿಳಾ ಅನುಯಾಯಿಗಳು ಮತ್ತು ಪತ್ರಕರ್ತರೊಬ್ಬರ ಹತ್ಯೆ ಕೇಸಿಗೆ ಸಂಬಂಧಪಟ್ಟಂತೆ 2017ರ ಆಗಸ್ಟ್ ನಲ್ಲಿ ಡೇರಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.

ರಹೀಮ್ ಜೊತೆಗೆ ಪ್ರಕರಣದ ಇತರ ಆರೋಪಿಗಳು ಅವತಾರ್ ಸಿಂಗ್, ಡೇರಾ ಮ್ಯಾನೇಜರ್ ಕೃಷ್ಣ ಲಾಲ್ ಮತ್ತು ಶೂಟರ್ ಜಸ್ಬೀರ್ ಸಿಂಗ್ ಮತ್ತು ಸಬ್ದಿಲ್ ಸಿಂಗ್ ಅವರು ಸಹ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಇಂದರ್ ಸೇನ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ನಿಧನ ಹೊಂದಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com