ಮುಂಬೈ ಕ್ರೂಸ್ ಡ್ರಗ್ಸ್ ಪಾರ್ಟಿ: ಆರ್ಯನ್ ಖಾನ್ ಅರ್ಜಿ ವಿಚಾರಣೆ ಅ.13ಕ್ಕೆ ಮುಂದೂಡಿಕೆ

ಡ್ರಗ್ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಮುಂಬೈಯ ಅರ್ಥೂರ್ ರೋಡ್ ಜೈಲಿನಲ್ಲಿ ಸೆರೆವಾಸದಲ್ಲಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. 
ಆರ್ಯನ್ ಖಾನ್ ನನ್ನು ವಿಚಾರಣೆಗೆ ಕರೆದೊಯ್ಯುತ್ತಿರುವ ಸಂಗ್ರಹ ಚಿತ್ರ
ಆರ್ಯನ್ ಖಾನ್ ನನ್ನು ವಿಚಾರಣೆಗೆ ಕರೆದೊಯ್ಯುತ್ತಿರುವ ಸಂಗ್ರಹ ಚಿತ್ರ

ಮುಂಬೈ: ಡ್ರಗ್ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಮುಂಬೈಯ ಅರ್ಥೂರ್ ರೋಡ್ ಜೈಲಿನಲ್ಲಿ ಸೆರೆವಾಸದಲ್ಲಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. 

ಮುಂಬೈಯ ವಿಶೇಷ ನಾರ್ಕೊಟಿಕ್ಸ್ ಡ್ರಗ್ಸ್ ಮತ್ತು ಸೈಕೊಟ್ರೊಪಿಕ್ ಸಬ್ ಸ್ಟೆನ್ಸ್ ಸ್ ಆಕ್ಟ್(ಎನ್ ಡಿಪಿಎಸ್) ಕೋರ್ಟ್ ಅರ್ಜಿ ವಿಚಾರಣೆಯನ್ನು ಇಂದು ಬುಧವಾರಕ್ಕೆ ಮುಂದೂಡಿದೆ. ಎನ್ ಸಿಬಿಗೆ ಬುಧವಾರ ಬೆಳಗ್ಗೆ ಉತ್ತರ ಸಲ್ಲಿಸಲು ಹೇಳಿರುವ ನ್ಯಾಯಾಲಯ ಮಧ್ಯಾಹ್ನ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಹೀಗಾಗಿ ಆರ್ಯನ್ ಖಾನ್ ಬುಧವಾರದವರೆಗೆ ಜೈಲಿನಲ್ಲಿರುವುದು ಪಕ್ಕಾ ಆಗಿದೆ. 

ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಆರ್ಯನ್ ಖಾನ್ ಪರ ವಕೀಲ ಸತೀಶ್ ಮನೆಶಿಂದೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ ಮೇಲಿನ ನ್ಯಾಯಾಲಯಕ್ಕೆ ಜಾಮೀನು ಕೋರಿ ನಾವು ಅರ್ಜಿ ಸಲ್ಲಿಸುವುದು ಸಹಜ. ಎನ್ ಡಿಪಿಎಸ್ ಕೋರ್ಟ್ ನಲ್ಲಿ ನಾವು ಅರ್ಜಿ ಸಲ್ಲಿಸಿದ್ದೇವೆ ಎಂದು ಇಂದು ಬೆಳಗ್ಗೆ ಹೇಳಿದ್ದರು.

ಕಳೆದ ಗುರುವಾರ ಮುಂಬೈಯ ಮ್ಯಾಜಿಸ್ಟ್ರೇಟ್ ಕೋರ್ಟ್ ಆರ್ಯನ್ ಖಾನ್ ಮತ್ತು ಇತರ ಏಳು ಮಂದಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಮೊನ್ನೆ ಶುಕ್ರವಾರ ಎಸ್ಪ್ಲನಡೆ ಕೋರ್ಟ್ ಆರ್ಯನ್ ಖಾನ್, ಅರ್ಬಾಜ್ ಸೇತ್ ಮರ್ಚೆಂಟ್ ಮತ್ತು ಮುನ್ಮುನ್ ಧಮೆಚ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. 

ಮುಂಬೈಯ ಕಡಲ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಳೆದ ಅಕ್ಟೋಬರ್ 2ರಂದು ತಡರಾತ್ರಿ ಬಂಧಿಸಿದ್ದರು. ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ ಒಟ್ಟು 20 ಮಂದಿಯನ್ನು ಈ ಕೇಸಿಗೆ ಸಂಬಂಧಿಸಿ ಬಂಧಿಸಲಾಗಿದೆ. 

ಅಕ್ಟೋಬರ್ 2ರ ಶನಿವಾರ ಕೊರ್ಡಲಿಯಾ ಕ್ರೂಸ್ ಹಡಗು ಮುಂಬೈ ಕಡಲ ತೀರದಿಂದ ಗೋವಾ ಕಡೆಗೆ ಹೊರಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com