ಬ್ರಿಟನ್ ಪ್ರಜೆಗಳಿಗೆ ಪರಿಷ್ಕೃತ ಪ್ರಯಾಣ ಮಾರ್ಗಸೂಚಿ ಹಿಂಪಡೆದ ಭಾರತ, 10 ದಿನ ಕ್ವಾರಂಟೈನ್ ರದ್ದು

ಕೋವಿಡ್ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಲಂಡನ್ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಪ್ರಯಾಣ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಲಂಡನ್ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಪ್ರಯಾಣ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ.

ಲಂಡನ್ ನಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ವಿಧಿಸಿದ್ದ 10 ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ತೆಗೆದುಹಾಕಿದ್ದು, ಪ್ರಯಾಣ ಸಲಹೆಯನ್ನು ಮರುಸ್ಥಾಪಿಸಿದೆ.

"2021 ಅಕ್ಟೋಬರ್ 1 ರಂದು ಭಾರತಕ್ಕೆ ಆಗಮಿಸಿದ ಬ್ರಿಟನ್ ಪ್ರಜೆಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹಿಂಪಡೆಯಲಾಗಿದೆ ಮತ್ತು 2021 ಫೆಬ್ರವರಿ 17 ರ ಅಂತರರಾಷ್ಟ್ರೀಯ ಆಗಮನದ ಹಿಂದಿನ ಮಾರ್ಗಸೂಚಿಗಳು ಯುಕೆಯಿಂದ ಭಾರತಕ್ಕೆ ಬರುವವರಿಗೆ ಅನ್ವಯವಾಗುತ್ತವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ, ಬ್ರಿಟನ್ ಗೆ ಪ್ರಯಾಣಿಸುವ ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಭಾರತೀಯರಿಗೂ 10 ದಿನಗಳ ಕ್ವಾರಂಟೈನ್ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವುದನ್ನು ಯುಕೆ ಕಡ್ಡಾಯಗೊಳಿಸಿತು.

ಅಕ್ಟೋಬರ್ 1 ರಂದು ದೇಶಕ್ಕೆ ಆಗಮಿಸುವ ಯುಕೆ ಪ್ರಜೆಗಳಿಗೆ ಹೆಚ್ಚುವರಿ ಪರೀಕ್ಷೆಗಳನ್ನು ವಿಧಿಸುವ ಮೂಲಕ ಭಾರತವೂ ಸಹ ನಿರ್ಬಂಧಗಳನ್ನು ವಿಧಿಸಿ, ದೇಶಕ್ಕೆ ಬಂದ ನಂತರ ಕಡ್ಡಾಯವಾಗಿ 10 ದಿನ ಕ್ವಾರಂಟೈನ್ ಗೆ ಒಳಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com