ಲಡಾಕ್, ಜಮ್ಮುವಿಗೆ ರಾಷ್ಟ್ರಪತಿ ಕೋವಿಂದ್ ಭೇಟಿ; ಯೋಧರೊಂದಿಗೆ ದಸರಾ ಆಚರಣೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಕ್ಟೋಬರ್ 14 ಮತ್ತು 15 ರಂದು ಲಡಾಖ್, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಗಡಿ ಕಾಯುವ ಯೋಧರೊಂದಿಗೆ ದಸರಾ ಉತ್ಸವ ಆಚರಿಸಲಿದ್ದಾರೆ.
Published: 13th October 2021 07:16 PM | Last Updated: 13th October 2021 07:16 PM | A+A A-

ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಕ್ಟೋಬರ್ 14 ಮತ್ತು 15 ರಂದು ಲಡಾಖ್, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಗಡಿ ಕಾಯುವ ಯೋಧರೊಂದಿಗೆ ದಸರಾ ಉತ್ಸವ ಆಚರಿಸಲಿದ್ದಾರೆ.
'2021ರ ಅಕ್ಟೋಬರ್ 14 ರಂದು, ರಾಷ್ಟ್ರಪತಿಗಳು ಸಿಂಧು ಘಾಟ್, ಲೇಹ್ ನಲ್ಲಿ ಸಿಂಧು ದರ್ಶನ ಪೂಜೆ ನೆರವೇರಿಸಲಿದ್ದಾರೆ'' ಎಂದು ರಾಷ್ಟ್ರಪತಿ ಭವನ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಿದ ರಾಷ್ಟ್ಪತಿ ಕೋವಿಂದ್!
ಕೋವಿಂದ್ ಅವರು ಸಂಜೆ ಉಧಂಪುರದಲ್ಲಿ ಸೈನ್ಯದೊಂದಿಗೆ ಸಂವಾದ ನಡೆಸಲಿದ್ದಾರೆ. ಅಕ್ಟೋಬರ್ 15 ರಂದು ರಾಷ್ಟ್ರಪತಿಗಳು ಡ್ರಾಸಿನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಗಳಿಗೆ ಗೌರವ ಸಲ್ಲಿಸುತ್ತಾರೆ ಮತ್ತು ಅಧಿಕಾರಿಗಳು ಹಾಗೂ ಜವಾನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.