ಜಮ್ಮು-ಕಾಶ್ಮೀರ: ಪುಲ್ವಾಮ ಎನ್ಕೌಂಟರ್ ನಲ್ಲಿ ಸೇನಾಪಡೆ ಗುಂಡಿಗೆ ಟಾಪ್ ಜೈಶ್ ಕಮಾಂಡರ್ ಶಾಮ್ ಸೋಫಿ ಹತ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ನನ್ನು ಸೇನಾಪಡೆಗಳು ಹೊಡೆದುರುಳಿಸಿವೆ.
Published: 13th October 2021 05:26 PM | Last Updated: 13th October 2021 06:22 PM | A+A A-

ಭಾರತೀಯ ಸೇನೆ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ನನ್ನು ಸೇನಾಪಡೆಗಳು ಹೊಡೆದುರುಳಿಸಿವೆ.
The terrorist killed in Tral encounter has been identified as Shamim Sofi aka Sham Sofi. He was the top local commander of the Jaish-e-Mohammed. He was first arrested in 2004 & spent 2 yrs in jail under PSA. He became active after coming out of jail: IGP Kashmir Vijay Kumar pic.twitter.com/Onqj1cUtlV
— ANI (@ANI) October 13, 2021
ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್ ಇ ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಟಾಪ್ ಕಮಾಂಡರ್ ಶಾಮ್ ಸೋಫಿ ಎಂಬ ಉಗ್ರನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಾಲ್ ಪ್ರದೇಶದ ತಿಲ್ವಾನಿ ಮೊಹಲ್ಲಾದಲ್ಲಿ ಜಂಟಿ ಪಡೆಗಳ ತಂಡವು ಉಗ್ರರ ಉಪಸ್ಥಿತಿ ಬಗ್ಗೆ ಖಚಿತ ಮಾಹಿತಿ ತಿಳಿದ ಬಳಿಕ ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿತ್ತು. ಈ ಬಗ್ಗೆ ಮಾತನಾಡಿರುವ ಸೇನಾಪಡೆಯ ಹಿರಿಯ ಅಧಿಕಾರಿಯೊಬ್ಬರು 'ಇದುವರೆಗೆ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಷ್ಟು ಉಗ್ರರು ಅಡಗಿರುವ ಶಂಕೆ ಇದೆ ಎಂದು ಹೇಳಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ರನ್ನೇ ಕೊಂದಿದ್ದ ಉಗ್ರ ಶಾಮ್
ಇನ್ನು ಇಂದು ಸೇನಾಪಡೆಗಳಿಂದ ಹತನಾದ ಉಗ್ರ ಶಾಮ್ ಸೋಫಿ ಈ ಹಿಂದೆ ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹತ್ಯೆಯಲ್ಲೂ ಪಾಲ್ಗೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಆತನ ವಿರುದ್ಧ ದೂರು ಕೂಡ ದಾಖಲಾಗಿತ್ತು.
ಇದಕ್ಕೂ ಮೊದಲು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಹತರಾದ ಒಂದು ದಿನದ ನಂತರ ಟ್ರಾಲ್ ನಲ್ಲಿ ಈ ಗುಂಡಿನ ಚಕಮಕಿ ನಡೆದಿತ್ತು.