ಯೂನಿಟೆಕ್ ಪ್ರಕರಣ: ತಿಹಾರ್ ಜೈಲಿನ 30 ಅಧಿಕಾರಿಗಳ ಅಮಾನತು

ಯುನಿಟೆಕ್​​ ಮಾಜಿ ಪ್ರವರ್ತಕರಿಗೆ ಸಹಾಯ ಮಾಡಿದ ಆರೋಪದಡಿ ತಿಹಾರ್​ ಜೈಲಿ​​ನ 30 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಿಹಾರ್ ಜೈಲು
ತಿಹಾರ್ ಜೈಲು

ನವದೆಹಲಿ: ಯುನಿಟೆಕ್​​ ಮಾಜಿ ಪ್ರವರ್ತಕರಿಗೆ ಸಹಾಯ ಮಾಡಿದ ಆರೋಪದಡಿ ತಿಹಾರ್​ ಜೈಲಿ​​ನ 30 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಯುನಿಟೆಕ್​ನ ಮಾಜಿ ಪ್ರೊಮೋಟರ್​ಗಳಾದ ಸಂಜಯ್​​ ಚಂದ್ರ ಮತ್ತು ಅಜಯ್​ ಚಂದ್ರ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ತಿಹಾರ್​ ಜೈಲು ಆಡಳಿತ ಮಂಡಳಿಯೂ 28 ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇಬ್ಬರು ಗುತ್ತಿಗೆ ನೌಕರರನ್ನು ಕೂಡ ಸೇವೆಯಿಂದ ತೆಗೆದು ಹಾಕಿದೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಿಹಾರ್​​​ ಹಿರಿಯ ಜೈಲು ಅಧಿಕಾರಿಗಳು ಈ ಹಿಂದೆ ಸೂಪರಿಂಟೆಂಡೆಂಟ್, ಡೆಪ್ಯುಟಿ ಸೂಪರಿಂಟೆಂಡೆಂಟ್ ಮತ್ತು ಇತರೆ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಕೋರಿ ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಎಲ್ಲಾ ಅಧಿಕಾರಿಗಳು ಪೊಲೀಸ್​ ವಿಚಾರಣೆ ವೇಳೆ ಪ್ರಮುಖರಾಗಿದ್ದರು ಎಂದು ಹೇಳಲಾಗಿದೆ. 

ಚಾಟಿ ಬೀಸಿದ್ದ ಸುಪ್ರೀಂ ಕೋರ್ಟ್
ಇನ್ನು ಜೈಲು ಅಧಿಕಾರಿಗಳನ್ನು ಅಮಾನತು ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಿಚಾರಣಾ ವರದಿಯನ್ನು ಪರಿಶೀಲಿಸಿದ ನಂತರ ಸುಪ್ರೀಂ​​ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಕ್ರಿಮಿನಲ್​​ ತನಿಖೆ ನಡೆಸಲು ಅನುಮತಿ ನೀಡಿತ್ತು. ಇದಾದ ನಂತರ ದೆಹಲಿ ಪೊಲೀಸ್ ಅಪರಾಧ ವಿಭಾಗವು ಮಂಗಳವಾರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿತ್ತು. 

ಅಲ್ಲದೆ ಈ ಪ್ರಕರಣದಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು. ಸೆಪ್ಟಂಬರ್ 28 ರಂದು ಪೊಲೀಸರು ವಿಚಾರಣಾ ವರದಿಯನ್ನು ಸಲ್ಲಿಸಿದ್ದರು. ನಂತರ ಸುಪ್ರೀಂಕೋರ್ಟ್ ಅ. 6 ರಂದು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿ ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಆದೇಶಿಸಿತ್ತು.

ತನಿಖೆಯ ಸಮಯದಲ್ಲಿ ತಿಹಾರ್ ಜೈಲ್​​ನ ನಂಬರ್​​ 7 ರ 32 ಅಧಿಕಾರಿಗಳು ಚಂದ್ರರಿಗೆ ಸಹಕರಿಸಿದ್ದಾರೆ. ಅವರು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ..
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com