ಇಂದೋರ್ ಗರ್ಬಾ ಗಲಾಟೆ: ಬಂಧಿತ ಮುಸ್ಲಿಂ ವಿದ್ಯಾರ್ಥಿಯ ಸಂಬಂಧಿಕರಿಂದ ಹೈಕೋರ್ಟ್ ಮೊರೆ
ಇಂದೋರ್ ನಲ್ಲಿ ಗರ್ಬಾ ನೃತ್ಯ ನಡೆಯುತ್ತಿದ್ದ ಪ್ರದೇಶದಲ್ಲಿ 21 ವರ್ಷದ ಬಿಕಾಂ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಆತಕ ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
Published: 14th October 2021 12:55 PM | Last Updated: 14th October 2021 12:55 PM | A+A A-

ಗರ್ಬಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿ ಹಾಕಲಾಗಿರುವ ಫಲಕ
ಇಂದೋರ್: ಇಂದೋರ್ ನಲ್ಲಿ ಗರ್ಬಾ ನೃತ್ಯ ನಡೆಯುತ್ತಿದ್ದ ಪ್ರದೇಶದಲ್ಲಿ 21 ವರ್ಷದ ಬಿಕಾಂ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಆತಕ ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಆಕ್ಸ್ಫರ್ಡ್ ಅಂತಾರಾಷ್ಟ್ರೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಗರ್ಬಾ ಕಾರ್ಯಕ್ರಮಕ್ಕೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹಿಂದುಯೇತರ ಮತೀಯರು ಇದ್ದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗದ್ದಲವೆಬ್ಬಿಸಿದ್ದರು.
ಮುಸ್ಲಿಂ ಸಮುದಾಯದ ನಾಲ್ವರು ಯುವಕರನ್ನು ಬಜರಂಗದಳದ ಕಾರ್ಯಕರ್ತರ ದಾಳಿಯ ನಂತರ ಬಂಧಿಸಲಾಗಿತ್ತು.
ಬಂಧಿತ ವಿದ್ಯಾರ್ಥಿ ಅದ್ನಾನ್ ಎಂಬಾತ ಈ ಬಗ್ಗೆ ಹೇಳಿಕೆ ನೀಡಿದ್ದು, ಕಾರ್ಯಕ್ರಮಕ್ಕೆ ತಮ್ಮನ್ನು ಸ್ವಯಂಸೇವಕರಾಗಿ ಆಹ್ವಾನಿಸಲಾಗಿತ್ತು.
"ನಾನು ಆಕ್ಸ್ಫರ್ಡ್ ಕಾಲೇಜಿನ ವಿದ್ಯಾರ್ಥಿ ಹಾಗೂ 25 ಸ್ವಯಂ ಸೇವಕರ (ಎಲ್ಲಾ ವಿದ್ಯಾರ್ಥಿಗಳು) ಇದ್ದರು. ಒಳಭಾಗದಲ್ಲಿ ನಾನು ಇರಲಿಲ್ಲ. ವಾಹನಗಳ ನಿಲುಗಡೆಯನ್ನು ಗಮನಿಸುತ್ತಿದೆ. ಏಕಾ ಏಕಿ 100-150 ಮಂದಿ ಬಜರಂಗದಳದವರೆಂದು ಹೇಳಿ ಬಂದರು. ಕಾರ್ಯಕ್ರಮದಲ್ಲಿದ್ದ ಎಲ್ಲರ ಗುರುತುಗಳನ್ನೂ ಕೇಳಿದರು. ನನ್ನ ಸ್ವಯಂಸೇವಕ ಕಾರ್ಡ್ ನ್ನು ತೋರಿಸಿದರೂ ಸಹ ಮುಸ್ಲಿಮನಾಗಿರುವುದಕ್ಕೆ ಗರ್ಬಾ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದು ಅವರು ಹೇಳಿದ್ದಾಗಿ ಅದ್ನಾನ್ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಎಸ್ ಪಿ (ಇಂದೋರ್ ವೆಸ್ಟ್) ಪ್ರಶಾಂತ್ ಚೌಬೆ ಒತ್ತಡದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ. " ಸರಿಯಾದ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ. ಹೆಚ್ಚು ಮಂದಿ ಸಂದರ್ಶಕರನ್ನು ಬಿಟ್ಟಿದ್ದಕ್ಕೆ ಕಾರ್ಯಕ್ರಮದ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ" ಎಂದು ವಿವರಿಸಿದ್ದಾರೆ. ಬಜರಂಗದಳ ಕಾರ್ಯಕರ್ತರ ಒತ್ತಡದ ಮೇರೆಗೆ ಪೊಲೀಸರು ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಅದ್ನಾನ್ ನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.