ಹೋರಿಗಳ ಸಂತಾನಶಕ್ತಿ ಹರಣ: ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್ ಟೀಕೆಗೆ ಮಣಿದ ಮಧ್ಯ ಪ್ರದೇಶ ಸರ್ಕಾರ 

ಮಧ್ಯಪ್ರದೇಶ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹೋರಿಗಳ ಸಂತಾನಶಕ್ತಿ ಹರಣ ಯೋಜನೆಯ ವಿರುದ್ಧ ತೀವ್ರ ಟೀಕೆ ಮಾಡಿದ್ದ ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್ ಟೀಕೆಗೆ ಅಲ್ಲಿನ ಬಿಜೆಪಿ ಸರ್ಕಾರ ಮಣಿದಿದೆ. 
ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್
ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹೋರಿಗಳ ಸಂತಾನಶಕ್ತಿ ಹರಣ ಯೋಜನೆಯ ವಿರುದ್ಧ ತೀವ್ರ ಟೀಕೆ ಮಾಡಿದ್ದ ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್ ಟೀಕೆಗೆ ಅಲ್ಲಿನ ಬಿಜೆಪಿ ಸರ್ಕಾರ ಮಣಿದಿದೆ. 

ಮಧ್ಯಪ್ರದೇಶ ಸರ್ಕಾರದ ನಡೆಯನ್ನು ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್ ದೇಶೀಯ ಗೋವುಗಳ ತಳಿಗಳಿಗೆ ಅಂತ್ಯ ಹಾಡುವ ಯೋಜನೆ ಎಂದು ಟೀಕಿಸಿದ್ದರು.

"ನಾನು ಸರ್ಕಾರದ ಆದೇಶವನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪಶುಸಂಗೋಪನೆ ಸಚಿವ ಪ್ರೇಮ್ ಸಿಂಗ್ ಪಟೇಲ್ ಅವರ ಗಮನಕ್ಕೆ ತಂದಿದ್ದೆ. ಈ ಬಳಿಕ ಸರ್ಕಾರ ಯೋಜನೆಯನ್ನು ಹಿಂಪಡೆದಿದೆ ಎಂದು ಪ್ರಗ್ಯಾಸಿಂಗ್ ಠಾಕೂರ್ ಹೇಳಿದ್ದಾರೆ. 

ಭೋಪಾಲ್ ನ ಸಂಸತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್, ಈ ಯೋಜನೆಯನ್ನು "ಆಂತರಿಕ ಷಡ್ಯಂತ್ರ" ಎಂದು ಹೇಳಿದ್ದರು.

"ಹೋರಿಗಳ ಸಂತಾನ ಶಕ್ತಿ ಹರಣ ಯೋಜನೆ ಆಂತರಿಕ ಷಡ್ಯಂತ್ರವಾಗಿದ್ದು ಎಚ್ಚರಿಕೆಯಿಂದ ಇರಬೇಕಾಗಿದೆ. ಏಕೆಂದರೆ ದೇಶೀಯ ಹಸುಗಳ ತಳಿಗಳನ್ನು ಯಾರೂ ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ. ಮಾಡಲೂಬಾರದು. ಆದರೂ ಸರ್ಕಾರ ಈ ರೀತಿಯ ಯೋಜನೆ ಕೈಗೊಳ್ಳಲು ಹೇಗೆ ಸಾಧ್ಯ ಎಂಬುದು ಮಾತ್ರ ತನಿಖೆಗೆ ಯೋಗ್ಯವಾದದ್ದು" ಎನ್ನುತ್ತಾರೆ ಪ್ರಗ್ಯಾ ಸಿಂಗ್ ಠಾಕೂರ್

ಈ ಯೋಜನೆ ರೂಪುಗೊಂಡಿದ್ದರ ಬಗ್ಗೆ ತನಿಖೆ ಪ್ರಾರಂಭಿಸಬೇಕೆಂದು ಸಿಎಂ ಗೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಅ.23 ರಿಂದ ಈ ಯೋಜನೆ ಜಾರಿಗೊಳಿಸಲು ಅಲ್ಲಿನ ಪಶುಸಂಗೋಪನೆ ಇಲಾಖೆ ಮುಂದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com