ಜನಸಂಖ್ಯಾ ಅಸಮತೋಲನ ಹೇಳಿಕೆ: ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ರನ್ನು ತರಾಟೆಗೆ ತೆಗೆದುಕೊಂಡ ಬಿಎಸ್ಪಿ

ದೇಶದ ನಿಜವಾದ ಸಮಸ್ಯೆಗಳಾದ ಹಸಿವು, ನಿರುದ್ಯೋಗ ಬಡತನ ಮುಂತಾದವುಗಳತ್ತ ಗಮನ ಹರಿಸಲು ಭಾಗವತ್ ಅವರಿಗೆ ಆಸಕ್ತಿಯಿಲ್ಲ
ಮೋಹನ್ ಭಾಗವತ್
ಮೋಹನ್ ಭಾಗವತ್

ನವದೆಹಲಿ: ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಸುಧೀಂದ್ರ ಬದೋರಿಯ ಅವರು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶದ ನಿಜವಾದ ಸಮಸ್ಯೆಗಳಾದ ಹಸಿವು, ನಿರುದ್ಯೋಗ ಬಡತನ ಮುಂತಾದವುಗಳತ್ತ ಗಮನ ಹರಿಸಲು ಭಾಗವತ್ ಅವರಿಗೆ ಆಸಕ್ತಿಯಿಲ್ಲ ಹೀಗಾಗಿಯೇ ಅವುಗಳಿಂದ ಜನರ ಗಮನವನ್ನು ದೂರ ಮಾಡಲು ಜನಸಂಖ್ಯಾ ಅಸಮತೋಲನ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಭಾಗವತ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.  

ವಿಜಯದಶಮಿ ಪ್ರಯುಕ್ತ ಭಾಷಣ ನೀಡುತ್ತಿದ್ದ ವೇಳೆ ಮೋಹನ್ ಭಾಗವತ್ ಅವರು ದೇಶದಲ್ಲಿ ಜನಸಂಖ್ಯಾ ಅಸಮತೋಲನ ಇರುವುದಾಗಿ ಆರೋಪಿದ್ದರು. ಅದನ್ನು ತೊಡೆದು ಹಾಕಲು ಜನಸಂಖ್ಯಾ ನೀತಿಯನ್ನು ಮರುಪರಿಶೀಲನೆ ನಡೆಸಬೇಕಾಗಿದೆ ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com