ಅರುಣಾಚಲ ಪ್ರದೇಶ ವಲಯದ ಗಡಿ ವಾಸ್ತವ ರೇಖೆಯುದ್ದಕ್ಕೂ ಕಣ್ಗಾವಲು ಬಿಗಿಗೊಳಿಸಿದ ಭಾರತ: ದಿನಪೂರ್ತಿ ಕಟ್ಟೆಚ್ಚರ 

ಚೀನಾ ದೇಶದ ಸೇನೆಯ ಯಾವುದೇ ರೀತಿಯ ದುಷ್ಕೃತ್ಯವನ್ನು ಎದುರಿಸಲು ಒಟ್ಟಾರೆ ಸೇನಾ ಸನ್ನದ್ಧತೆಯನ್ನು ಬಲಪಡಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿ ರಿಮೋಟ್ ಪೈಲಟ್ ವಿಮಾನ ಮತ್ತು ಇತರ ಸ್ವತ್ತುಗಳ ಸಮೂಹವನ್ನು ಬಳಸುವುದು ಸೇರಿದಂತೆ ಅರುಣಾಚಲ ಪ್ರದೇಶ ವಲಯದ ಗಡಿ ವಾಸ್ತವ ರೇಖೆ(ಎಲ್ ಎಸಿ)ಬಳಿ ಭಾರತ ಹಗಲು-ರಾತ್ರಿ ಕಣ್ಗಾವಲನ್ನು ಹೆಚ್ಚಿಸಿದೆ ಎಂದು ಅಲ್ಲಿನ ಬೆಳವಣಿಗೆಗಳ ಬಗ್ಗೆ
ಭಾರತೀಯ ಸೇನೆ(ಸಂಗ್ರಹ ಚಿತ್ರ)
ಭಾರತೀಯ ಸೇನೆ(ಸಂಗ್ರಹ ಚಿತ್ರ)

ಮಿಸಮರಿ: ಚೀನಾ ದೇಶದ ಸೇನೆಯ ಯಾವುದೇ ರೀತಿಯ ದುಷ್ಕೃತ್ಯವನ್ನು ಎದುರಿಸಲು ಒಟ್ಟಾರೆ ಸೇನಾ ಸನ್ನದ್ಧತೆಯನ್ನು ಬಲಪಡಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿ ರಿಮೋಟ್ ಪೈಲಟ್ ವಿಮಾನ ಮತ್ತು ಇತರ ಸ್ವತ್ತುಗಳ ಸಮೂಹವನ್ನು ಬಳಸುವುದು ಸೇರಿದಂತೆ ಅರುಣಾಚಲ ಪ್ರದೇಶ ವಲಯದ ಗಡಿ ವಾಸ್ತವ ರೇಖೆ(ಎಲ್ ಎಸಿ)ಬಳಿ ಭಾರತ ಹಗಲು-ರಾತ್ರಿ ಕಣ್ಗಾವಲನ್ನು ಹೆಚ್ಚಿಸಿದೆ ಎಂದು ಅಲ್ಲಿನ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ಹೇಳುತ್ತಿದ್ದಾರೆ.

ಕಳೆದ ವರ್ಷ ಗಲ್ವಾನ್ ಗಡಿ ಸಂಘರ್ಷದ ನಂತರ ಎರಡೂ ದೇಶಗಳ ಮಧ್ಯೆ ಗಡಿಯಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿದ್ದು, ಇದರ ನಂತರ ಗಡಿ ವಾಸ್ತವ ರೇಖೆಯುದ್ದಕ್ಕೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಸುಮಾರು 3 ಸಾವಿರದ 400 ಕಿಲೋ ಮೀಟರ್ ಉದ್ದಕ್ಕೂ ಸೇನೆಯ ಒಟ್ಟಾರೆ ನಿಯೋಜನೆಯನ್ನು ಭಾರತ ಹೆಚ್ಚಿಸಿದೆ.

ಇಸ್ರೇಲಿ ನಿರ್ಮಿತ ಹೆರಾನ್ ಮಧ್ಯಮ-ಎತ್ತರದ ದೀರ್ಘ-ಸಹಿಷ್ಣುತೆಯ ಡ್ರೋನ್‌ಗಳು ಪರ್ವತ ಪ್ರದೇಶದಲ್ಲಿ ಗಡಿ ವಾಸ್ತವ ರೇಖೆಯ ಮೇಲೆ ಸುತ್ತಲೂ ದಿನದ 24 ಗಂಟೆ ಕಣ್ಗಾವಲು ನಡೆಸುತ್ತಿವೆ ಮತ್ತು ಅಲ್ಲಿನ ದಾಖಲೆಗಳು, ಚಿತ್ರಗಳನ್ನು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳಿಗೆ ಕಳುಹಿಸುತ್ತಿವೆ ಎಂದು ಹೇಳಲಾಗಿದೆ.

ಡ್ರೋನ್‌ಗಳ ಜೊತೆಯಲ್ಲಿ, ಭಾರತೀಯ ಸೇನೆಯ ವಾಯುಪಡೆ, ಈ ಪ್ರದೇಶದಲ್ಲಿ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ (ಡಬ್ಲ್ಯೂಎಸ್ಐ) ನಿಯೋಜಿಸುತ್ತಿದೆ, ಈ ಪ್ರದೇಶದಲ್ಲಿ ತನ್ನ ಕಾರ್ಯತಂತ್ರದ ಕಾರ್ಯಾಚರಣೆಗಳಿಗೆ ಹೆಚ್ಚಿನ ಶಕ್ತಿ ನೀಡಲು ಸಾಧನಗಳನ್ನು ಬಳಸುತ್ತಿದೆ ಎಂದು ಸುತ್ತಮುತ್ತಲಿನ ಜನರು ಹೇಳುತ್ತಾರೆ.

ಈ ಪ್ರದೇಶದಲ್ಲಿ ತನ್ನ ವಾಯುಯಾನ ವಿಭಾಗದ ವಿಸ್ತರಣೆಯಲ್ಲಿ, ಸೂಕ್ಷ್ಮ ಪ್ರದೇಶದಲ್ಲಿ ತನ್ನ ಒಟ್ಟಾರೆ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲು ಸೇನೆಯು ಈ ವರ್ಷ ಸ್ವತಂತ್ರ ವಾಯುಯಾನ ದಳವನ್ನು ಹೊರತಂದಿದೆ ಎಂದು ಕೂಡ ಹೇಳಿದ್ದಾರೆ.

ಹೆರಾನ್ ಡ್ರೋನ್‌ಗಳನ್ನು ಈ ಪ್ರದೇಶದಲ್ಲಿ ಮೊದಲು ನಾಲ್ಕೈದು ವರ್ಷಗಳ ಹಿಂದೆ ನಿಯೋಜಿಸಲಾಗಿದ್ದರೂ, ಯಾವುದೇ ಸಂಭಾವ್ಯ ಕಾರ್ಯಾಚರಣೆಯ ಉದ್ದೇಶಗಳಿಗಾಗಿ ಮಿಲಿಟರಿ ಪಡೆಗಳನ್ನು ನೇಮಿಸಲು 'ಸೆನ್ಸಾರ್ ಟು ಶೂಟರ್' ಪರಿಕಲ್ಪನೆಯ ಅಡಿಯಲ್ಲಿ ಈಗ ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಎಎಲ್‌ಹೆಚ್ ಹೆಲಿಕಾಪ್ಟರ್‌ಗಳ ಡಬ್ಲ್ಯೂಎಸ್‌ಐ ಆವೃತ್ತಿಯ ನಿಯೋಜನೆಯು ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ವಿವಿಧ ಕಾರ್ಯಾಚರಣೆಗಳನ್ನು ನಡೆಸಲು ಸೇನೆಗೆ ಹೆಚ್ಚುವರಿ ಪ್ರಯೋಜನವನ್ನು ಒದಗಿಸಿದೆ.

ಒಟ್ಟಾರೆಯಾಗಿ, ಇಲ್ಲಿ ಹಗಲು-ರಾತ್ರಿಯ ಕಣ್ಗಾವಲು ಸಾಮರ್ಥ್ಯವು ಕಳೆದ ವರ್ಷದಿಂದ ಹೊಸತನವನ್ನು ಪಡೆದಿದೆ. ಈ ಪ್ರದೇಶದಲ್ಲಿ ಯಾವುದೇ ಘಟನೆಗಳನ್ನು ಎದುರಿಸಲು ಉತ್ತಮ ರೀತಿಯಲ್ಲಿ ಸನ್ನದ್ಧರಾಗಿದ್ದೇವೆ. ಭಾರತೀಯ ಸೇನೆಯು 35 ಸಾವಿರ ಅಡಿ ಎತ್ತರದಲ್ಲಿ ಸುಮಾರು 45 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಇಸ್ರೇಲ್‌ನಿಂದ ಗುತ್ತಿಗೆಗೆ ಹೆರಾನ್ ಟಿಪಿ ಡ್ರೋನ್‌ಗಳನ್ನು ಪಡೆಯುತ್ತಿದೆ. ಹೆರಾನ್ ಟಿಪಿ ಡ್ರೋನ್‌ಗಳು ಸ್ವಯಂಚಾಲಿತ ಟ್ಯಾಕ್ಸಿ-ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (ಎಟಿಒಎಲ್) ಮತ್ತು ಉಪಗ್ರಹ ಸಂವಹನ (ಎಸ್‌ಎಟಿಕಾಮ್) ವ್ಯವಸ್ಥೆಯನ್ನು ವಿಸ್ತೃತ ಶ್ರೇಣಿಯೊಂದಿಗೆ ಹೊಂದಿವೆ.

ಪಂಗಾಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವೆ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಕಳೆದ ವರ್ಷ ಮೇ 5 ರಂದು ಭುಗಿಲೆದ್ದಿತು, ಎರಡೂ ಕಡೆಯಿಂದ ಶಸ್ತ್ರಾಸ್ತ್ರ, ಸೈನಿಕರ ನಿಯೋಜನೆ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕಳೆದ ವರ್ಷ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ ಉದ್ವಿಗ್ನತೆ ಅಧಿಕವಾಗತೊಡಗಿತು. 

ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಸರಣಿಯ ಪರಿಣಾಮವಾಗಿ, ಉಭಯ ದೇಶಗಳು ಕಳೆದ ಆಗಸ್ಟ್ ನಲ್ಲಿ ಗೋಗ್ರಾ ಪ್ರದೇಶದಲ್ಲಿ ಮತ್ತು ಫೆಬ್ರವರಿಯಲ್ಲಿ ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಸೇನೆಯನ್ನು ಹಿಂಪಡೆದಿದ್ದರು, 
ಇತ್ತೀಚೆಗೆ ಅಂದರೆ ಮೊನ್ನೆ ಅಕ್ಟೋಬರ್ 10 ರಂದು ನಡೆದ 13ನೇ ಸುತ್ತಿನ ಮಿಲಿಟರಿ ಮಾತುಕತೆ ಚೀನಾದ ಮೊಂಡುತನದಿಂದ ವಿಫಲವಾಗಿದೆ. ಪ್ರಸ್ತುತ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ಸುಮಾರು 50 ಸಾವಿರದಿಂದ 60 ಸಾವಿರ ಸೈನಿಕರು ನಿಯೋಜನೆಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com