ಮೋದಿ ಭೇಟಿ ಮಾಡಿದ ಕುಸ್ತಿಪಟು; ವಿನೇಶ್ ಫೋಗಾಟ್ ಕನಸು-ನನಸು

ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಬೇಕು. ಅವರೊಂದಿಗೆ ನನ್ನ ಕುಟುಂಬ ಪರಿಚಯ ಮಾಡಿಸಬೇಕೆಂಬ ಕನಸನ್ನು ಕುಸ್ತಿ ಪಟು ವಿನೇಶ್ ಪೋಗಾಟ್ ಈಡೇರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಭೇಟಿಯಾಗಿರುವ ಫೋಟೋವನ್ನು ವಿನೇಶ್ ಫೋಗಾಟ್ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ವಿನೇಶ್ ಫೋಗಾಟ್
ವಿನೇಶ್ ಫೋಗಾಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಬೇಕು. ಅವರೊಂದಿಗೆ ನನ್ನ ಕುಟುಂಬ ಪರಿಚಯ ಮಾಡಿಸಬೇಕೆಂಬ ಕನಸನ್ನು ಕುಸ್ತಿ ಪಟು ವಿನೇಶ್ ಪೋಗಾಟ್ ಈಡೇರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಭೇಟಿಯಾಗಿರುವ ಫೋಟೋವನ್ನು ವಿನೇಶ್ ಫೋಗಾಟ್ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಪ್ರಧಾನಿಯಾದವರಿಗೆ ಸಮಯಾವಕಾಶ ದೊರೆಯಲ್ಲ. ಆದ್ರೂ ಸಹ ನಮ್ಮ ಕುಟುಂಬದೊಂದಿಗೆ ಅವರು ಉತ್ತಮವಾಗಿ ಮಾತುಕತೆ ನಡೆಸಿದರು. ಆಟದ ಮೇಲಿನ ಪ್ರಧಾನಿಯವರ ಪ್ರೀತಿ, ಉತ್ಸಾಹ ಅತೀತವಾಗಿದೆ. ಆಟಗಾರರ ಬಗ್ಗೆ ಅವರಿಗೆ ಇರುವ ಕಾಳಜಿ ಕಂಡು ನಾನು ಪ್ರಭಾವಿತಳಾಗಿದ್ದೇನೆ. ಅಲ್ಲದೆ, ತನ್ನ ಕುಟುಂಬದೊಂದಿಗೆ ಭೇಟಿ ಮಾಡುವ ಭರವಸೆ ಈಡೇರಿಸಿದ್ದಕ್ಕಾಗಿ ವಿನೇಶ್ ಫೋಗಾಟ್ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com