
ಸಾಂದರ್ಭಿಕ ಚಿತ್ರ
ನವದೆಹಲಿ: ವಿಶ್ವದ ಮೂರನೇ ಅತಿ ದೊಡ್ಡ ಇಂಧನ ಗ್ರಾಹಕ ರಾಷ್ಟ್ರವಾದ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದೆ. ಸೌದಿ ಹಾಗೂ ಇತರೆ ತೈಲ ಮಾರಾಟ ರಾಷ್ಟ್ರಗಳು ಸಮಾಲೋಚನೆ ನಡೆಸಿ ರೀಸನೆಬಲ್ ದರ ನಿಗದಿ ಪಡಿಸಲು ಭಾರತ ಸಲಹೆ ನೀಡಿದೆ.
ಇದನ್ನೂ ಓದಿ: ಉತ್ತರ ಭಾರತದಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ: ತೈಲ ಬೆಲೆಯೇರಿಕೆ ಮತ್ತು ಅತಿವೃಷ್ಟಿ ಕಾರಣ
ಕೊರೊನಾದಿಂದ ಕುಸಿತ ಕಂಡಿರುವ ದೇಶಗಳ ಆರ್ಥಿಕತೆ ಈಗ ತಾನೆ ಚೇತರಿಕೆ ಹಾದಿಯಲ್ಲಿದೆ. ಆದರೆ ತೈಲ ದರ ಏರಿಕೆಯಿಂದ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ ಎಂದು ಭಾರತ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ದಾಖಲೆ ಪ್ರಮಾಣದಷ್ಟು ಏರಿಕೆ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಆರ್ಥಿಕ ಚೇತರಿಕೆ ಕುಂಠಿತ ಗೊಳ್ಳಲಿದೆ ಎಂದು ಇಂಧನ ಸಚಿವ ಹರ್ ದೀಪ್ ಸಿಂಗ್ ಪುರಿ
ಇದನ್ನೂ ಓದಿ: ಹವಾಯಿ ಚಪ್ಪಲಿ ಧರಿಸಿರುವವರು ವಿಮಾನದಲ್ಲಿ ಪ್ರಯಾಣಿಸುವುದಿರಲಿ, ಜನ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ!
ಕಳೆದ ವರ್ಷ ಕೊರೊನಾದಿಂದಾಗಿ ಜಗತ್ತಿನೆಲ್ಲೆಡೆ ಲಾಕ್ ಡೌನ್ ಹೇರಿಕೆಯಾದಾಗ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ತೆಯಲ್ಲಿ ತೀವ್ರ ಕುಸಿತ ಕಂಡಿತ್ತು.
ಇದನ್ನೂ ಓದಿ: ಡಿಸೇಲ್ ಮೇಲಿನ ತೆರಿಗೆ ಇಳಿಸದಿದ್ದರೇ ಅನಿರ್ದಿಷ್ಟಾವಧಿ ಮಷ್ಕರ: ಲಾರಿ ಮಾಲೀಕರ ಎಚ್ಚರಿಕೆ
ಲಾಕ್ ಡೌನ್ ನಿರ್ಬಂಧ ತೆಗೆದಾಗಿನಿಂದ ತೈಲ ಬೇಡಿಕೆ ಏಕಾಏಕಿ ಹೆಚ್ಚಿತ್ತು. ಆಗಿನಿಂದ ತೈಲ ದರ ಏರಿಕೆಯ ಹಾದಿಯಲ್ಲಿಯೇ ಇದೆ. 2020ರಲ್ಲಿ ಭಾರತದ ತೈಲ ಆಮದು ವೆಚ್ಚ 880 ಕೋಟಿ ಡಾಲರ್ ನಷ್ಟಿತ್ತು. ಈ ವರ್ಷ ಬೆಲೆ ಏರಿಕೆಯಿಂದಾಗಿ 2,400 ಕೋಟಿ ಡಾಲರ್ ತಲುಪಿದೆ.