ಕಾಂಗ್ರೆಸ್ ಅವಧಿಯಲ್ಲಿ ಕೋವಿಡ್ ಬಂದಿದಿದ್ದರೆ ಅಣ್ಣ-ತಂಗಿ ಇಬ್ಬರು ಇಟಲಿಗೆ ಪರಾರಿಯಾಗುತ್ತಿದ್ದರು: ಯೋಗಿ ಆದಿತ್ಯನಾಥ್

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಬಂದಿದ್ದರೇ ಅಣ್ಣ-ತಂಗಿ ಇಬ್ಬರು ಇಟಲಿಗೆ ಓಡಿ ಹೋಗುತ್ತಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಕ್ನೋ:  ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಬಂದಿದ್ದರೇ ಅಣ್ಣ-ತಂಗಿ ಇಬ್ಬರು ಇಟಲಿಗೆ ಓಡಿ ಹೋಗುತ್ತಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ.

ಸಾಮಾಜಿಕ್ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.  ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಬಂದಿದ್ದರೇ ಅಣ್ಣ-ತಂಗಿ ಇಬ್ಬರು ಇಟಲಿಗೆ ಓಡಿ ಹೋಗುತ್ತಿದ್ದರು, ಸಮಾಜವಾದಿ ಪಕ್ಷದ (ಎಸ್‌ಪಿ) ಸರ್ಕಾರ ಇದ್ದಿದ್ದರೆ, ಚಿಕ್ಕಪ್ಪ ಮತ್ತು ಸೋದರಳಿಯರ ನಡುವೆ ಸೂಕ್ತ ಸಹಾಯಕ್ಕಾಗಿ ಸ್ಪರ್ಧೆ ಏರ್ಪಡುತ್ತಿತ್ತು, ಅವರು ಬಡವರ ಬಗ್ಗೆ ಗಮನ ಹರಿಸುತ್ತಿರಲಿಲ್ಲ, ಇನ್ನೂ "ಬೆಹನ್ ಜಿ" ಸರ್ಕಾರ ಇದ್ದಿದ್ದರೇ  ಏನಾಗಬಹುದಿತ್ತೆಂದು ದೇವರಿಗೆ ಮಾತ್ರ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.

ನವೆಂಬರ್ 2, 1990 ರಂದು ಬಿಜೆಪಿ ಸರ್ಕಾರವಿದ್ದಿದ್ದರೇ ಯಾರೂ ರಾಮಭಕ್ತರ ಮೇಲೆ ಗುಂಡು ಹಾರಿಸಲು ಧೈರ್ಯ ಮಾಡುತ್ತಿರಲಿಲ್ಲ. ಗುಂಡು ಹಾರಿಸಿದವರು 'ರಾಮದ್ರೋಹಿ' ಆಗಿದ್ದು, ಮತ ಬ್ಯಾಂಕ್‌ಗಾಗಿ ರಾಮ ಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದರು. ರಾಮನಿಗೆ ಸೇರದವರು ನಮಗೂ ಸೇರುವುದಿಲ್ಲ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಕುಟುಂಬವನ್ನು ಭೇಟಿಯಾದ ಬಗ್ಗೆ ಯೋಗಿ ಆದಿತ್ಯನಾಥ್ ಪ್ರಶ್ನಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುಳಿದ ಜಾತಿಗಳ ಸ್ಥಿತಿಯನ್ನುಸುಧಾರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ ಅವರು,  ಹಿಂದುಳಿದ ವರ್ಗಗಳ ಸಬಲೀಕರಣದ ಕಡೆಗೆ ಒಬಿಸಿ ಆಯೋಗಕ್ಕೆ ನೀಡಲಾದ ಸಾಂವಿಧಾನಿಕ ಹಕ್ಕು ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಅವರು ತಿಳಿಸಿದರು. ವಿವಿಧ ಸಮುದಾಯಗಳ ಕಲ್ಯಾಣಕ್ಕಾಗಿ ವಿವಿಧ ಸರ್ಕಾರಿ ಯೋಜನೆಗಳನ್ನು ತಾರತಮ್ಯವಿಲ್ಲದೆ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com