ಪ್ರಿಯಾಂಕಾ ಗಾಂಧಿ ಬಾರಾಬಂಕಿಯಿಂದ 'ಪ್ರತಿಜ್ಞಾ ಯಾತ್ರೆ' ಆರಂಭಿಸಲಿದ್ದಾರೆ: ಕಾಂಗ್ರೆಸ್

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ಅಳವಡಿಸಿಕೊಂಡ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು...
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ಅಳವಡಿಸಿಕೊಂಡ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು ಶನಿವಾರ ಬರಾಬಂಕಿಯಿಂದ 'ಪ್ರತಿಜ್ಞಾ ಯಾತ್ರೆ' ಆರಂಭಿಸಲಿದ್ದಾರೆ.

ಈ ಸಂದರ್ಭದಲ್ಲಿ, ಅವರು ಚುನಾವಣಾ ಪ್ರಣಾಳಿಕೆಯ ಹೊರತಾಗಿ ಉತ್ತರ ಪ್ರದೇಶ ಜನರಿಗಾಗಿ ತೆಗೆದುಕೊಂಡ ಏಳು ನಿರ್ಣಯಗಳನ್ನು ವಿವರಿಸಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಛತ್ತೀಸ್‌ಗಢದ ಕಾಂಗ್ರೆಸ್ ಉಸ್ತುವಾರಿ ಪಿ ಎಲ್ ಪುನಿಯಾ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬರಾಬಂಕಿಯಿಂದ ಬುಂದೇಲ್‌ಖಂಡ್, ಸಹರಾನ್‌ಪುರದಿಂದ ಮಥುರಾ ಮತ್ತು ವಾರಣಾಸಿಯಿಂದ ರಾಯ್ ಬರೇಲಿಯವರೆಗೆ ಮೂರು ಮಾರ್ಗಗಳಲ್ಲಿ ಅಕ್ಟೋಬರ್ 23 ರಿಂದ ನವೆಂಬರ್ 1 ರವರೆಗೆ 'ಪ್ರತಿಜ್ಞಾ ಯಾತ್ರೆ' ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅವಧ್ ಪ್ರದೇಶವನ್ನು ಒಳಗೊಂಡ ವಾರಣಾಸಿಯಿಂದ ರಾಯ್ ಬರೇಲಿ ಮಾರ್ಗದ ಯಾತ್ರೆಯನ್ನು ಮಾಜಿ ಸಂಸದ ಪ್ರಮೋದ್ ತಿವಾರಿ ಮುನ್ನಡೆಸಿದರೆ, ಬಾರಾಬಂಕಿ-ಬುಂದೇಲ್‌ಖಂಡ್ ಮಾರ್ಗವನ್ನು ಪುನಿಯಾ ಮತ್ತು ಕೇಂದ್ರದ ಮಾಜಿ ಸಚಿವ ಪ್ರದೀಪ್ ಜೈನ್ ಆದಿತ್ಯ ನೇತೃತ್ವ ವಹಿಸಲಿದ್ದಾರೆ

ರಾಜ್ಯದ ಪಶ್ಚಿಮ ಭಾಗಗಳನ್ನು ಒಳಗೊಂಡ ಸಹರನ್ ಪುರ-ಮಥುರಾ ಮಾರ್ಗದ ಯಾತ್ರೆಯ ನೇತೃತ್ವದ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com