ಉತ್ತರ ಪ್ರದೇಶ ಸರ್ಕಾರದ ಮೇಲ್ಮನವಿ: ಟ್ವಿಟ್ಟರ್ ಇಂಡಿಯಾ ಮಾಜಿ ಎಂಡಿ ಮನೀಶ್ ಮಹೇಶ್ವರಿಗೆ ಸುಪ್ರೀಂ ಕೋರ್ಟ್ ನೊಟೀಸ್
ಟ್ವಿಟ್ಟರ್ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮನೀಶ್ ಮಹೇಶ್ವರಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ಜಾರಿ ಮಾಡಿದೆ.
Published: 22nd October 2021 02:05 PM | Last Updated: 22nd October 2021 05:22 PM | A+A A-

ಮನೀಶ್ ಮಹೇಶ್ವರಿ
ನವದೆಹಲಿ: ಟ್ವಿಟ್ಟರ್ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮನೀಶ್ ಮಹೇಶ್ವರಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ಜಾರಿ ಮಾಡಿದೆ.
ಟ್ವಿಟ್ಟರ್ ನಲ್ಲಿ ಕೋಮು ಗಲಭೆಯನ್ನುಂಟುಮಾಡುವ ಸೂಕ್ಷ್ಮ ವಿಡಿಯೊ ಅಪ್ ಲೋಡ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಮನೀಶ್ ಮಹೇಶ್ವರಿ ಹಾಜರಾಗುವಂತೆ ಕೋರಿ ನೋಟಿಸ್ ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ನಿರ್ಧಾರದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ನೊಟೀಸ್ ಜಾರಿ ಮಾಡಿದೆ.
ಉತ್ತರ ಪ್ರದೇಶ ಪೊಲೀಸರು ಕಳೆದ ಜೂನ್ 16ರಂದು ಲೊನಿ ಘಟನೆಗೆ ಸಂಬಂಧಪಟ್ಟಂತೆ 9 ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಅದರಲ್ಲಿ ಟ್ವಿಟ್ಟರ್ ಇಂಡಿಯಾದ ವಿರುದ್ಧ ಕೂಡ ಕೇಸು ದಾಖಲಾಗಿತ್ತು.
ಈ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಜೂನ್ 24ರಂದು ಮಹೇಶ್ವರಿ ಅವರಿಗೆ ಮಧ್ಯಂತರ ರಕ್ಷಣೆ ನೀಡಿ, ತನಿಖೆಗೆ ಸಂಬಂಧಪಟ್ಟಂತೆ ಮುಂದಿನ ವಿಚಾರಣೆ ನಡೆಸುವವರಿಗೆ ಯಾವುದೇ ಕ್ರಮ ಕೈಗೊಳ್ಳದಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿತ್ತು.
ಉತ್ತರ ಪ್ರದೇಶ ಸರ್ಕಾರ ಕರ್ನಾಟಕ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮನೀಶ್ ಮಹೇಶ್ವರಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿತ್ತು.