ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ: ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ
ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್ನನ್ನು ಬಿಡುಗಡೆ ಮಾಡಿದೆ.
Published: 22nd October 2021 06:27 PM | Last Updated: 22nd October 2021 06:27 PM | A+A A-

ತಿರುಪತಿ ತಿರುಮಲ ದೇವಸ್ಥಾನ
ತಿರುಮಲ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್ನನ್ನು ಬಿಡುಗಡೆ ಮಾಡಿದೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ದರ್ಶನ ಪಡೆಯಲು ಬಯಸುವವರು ಶುಕ್ರವಾರ ಬೆಳಗ್ಗೆ 9 ರಿಂದ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟಿಕೆಟ್‌ಗಳನ್ನು ವರ್ಚುಯಲ್ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು ಶಾಸಕ ಎಸ್.ಆರ್.ವಿಶ್ವನಾಥ್, ಟಿಎ ಶರಣವಣ ಸೇರಿ, ಟಿಟಿಡಿಗೆ 52 ವಿಶೇಷ ಆಹ್ವಾನಿತರ ನೇಮಕ
ನವೆಂಬರ್ ತಿಂಗಳಿನಲ್ಲಿ ಸರ್ವ ದರ್ಶನದ ಟಿಕೆಟ್‌ಗಳನ್ನು ಶನಿವಾರ ಬೆಳಗ್ಗೆ 9 ರಿಂದ ಆನ್‌ಲೈನ್ ಬುಕಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿಯೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿತ್ಯ 12 ಸಾವಿರ ಟೋಕನ್‌ಗಳು ಲಭ್ಯ ಇದೆ. ಹಾಗೆಯೇ ನವೆಂಬರ್ ಕೋಟಾದ ಸರ್ವ ದರ್ಶನ ಟಿಕೆಟ್ ಸ್ಲಾಟ್ ಅನ್ನು ಭಾನುವಾರ ಬೆಳಗ್ಗೆ 9ಗಂಟೆಗೆ ತೆರೆಯಲಿದ್ದು, ಭಕ್ತರು ಆನ್‌ಲೈನ್ ಮೂಲಕ ಬುಕಿಂಗ್ ಮಾಡಬಹುದು.
ಕೊವಿಡ್ 19 ನೆಗೆಟಿವ್ ವರದಿ ತರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ಟಿಟಿಡಿ ಜಾರಿಗೊಳಿಸಿದೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಲು ಹೇರಿರುವ ಭಕ್ತರ ಸಂಖ್ಯಾ ಮಿತಿಯನ್ನು ಹೆಚ್ಚುಗೊಳಿಸಬೇಕು ಎಂಬ ಒತ್ತಡವೂ ಅದರ ಮೇಲೆ ಜಾಸ್ತಿಯಾಗುತ್ತಿದೆ. ಹಾಗಾಗಿ ಈ ಬಾರಿ ಕೋಟಾದಲ್ಲಿ ಜಾಸ್ತಿ ಟಿಕೆಟ್ ಬಿಡುಗಡೆ ಮಾಡಬಹುದಾ ಎಂಬ ಕುತೂಹಲವೂ ಸಹಜವಾಗಿಯೇ ಎದ್ದಿದೆ.
ಸದ್ಯ ಒಂದು ದಿನಕ್ಕೆ 30,000ಕ್ಕಿಂತಲೂ ಕಡಿಮೆ ಭಕ್ತರು ತಿರುಮಲ ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ. ಕೊವಿಡ್ 19 ಸಾಂಕ್ರಾಮಿಕಕ್ಕೂ ಪೂರ್ವ ಈ ದೇವಾಲಯದಲ್ಲಿ ಒಂದು ದಿನಕ್ಕೆ 79-80 ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇತ್ತು.