ಉತ್ತರಾಖಂಡ ಮಳೆ: ಐವರು ಪ್ರವಾಸಿಗರು ಸಾವು, ಮೃತರ ಸಂಖ್ಯೆ 65ಕ್ಕೆ ಏರಿಕೆ, ರಾಜ್ಯಕ್ಕೆ 7 ಸಾವಿರ ಕೋಟಿ ರೂ. ನಷ್ಟ

ಪ್ರವಾಹಪೀಡಿತ ಮಳೆಗೆ ಉತ್ತರಾಖಂಡದ ಕುಮೌನ್ ನ ಕಪ್ಕೊಟ್ ನಲ್ಲಿ ಐವರು ಪ್ರವಾಸಿಗರು ಸಿಲುಕಿಹಾಕಿಕೊಂಡಿದ್ದು ಮಳೆ ಸಂಬಂಧಿ ಅವಘಡಗಳಿಗೆ ಮೃತಪಟ್ಟವರ ಸಂಖ್ಯೆ 65ಕ್ಕೇರಿದ್ದು, 7 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಉತ್ತರಾಖಂಡದ ಉಧಮ್ ಸಿಂಗ್ ನಗರದ ಪ್ರವಾಹ ಪೀಡಿತ ರಸ್ತೆಯಲ್ಲಿ ಎನ್ ಡಿಆರ್ ಎಫ್ ತಂಡದಿಂದ ಕಾರ್ಯಾಚರಣೆ
ಉತ್ತರಾಖಂಡದ ಉಧಮ್ ಸಿಂಗ್ ನಗರದ ಪ್ರವಾಹ ಪೀಡಿತ ರಸ್ತೆಯಲ್ಲಿ ಎನ್ ಡಿಆರ್ ಎಫ್ ತಂಡದಿಂದ ಕಾರ್ಯಾಚರಣೆ

ಡೆಹ್ರಾಡೂನ್: ಪ್ರವಾಹಪೀಡಿತ ಮಳೆಗೆ ಉತ್ತರಾಖಂಡದ ಕುಮೌನ್ ನ ಕಪ್ಕೊಟ್ ನಲ್ಲಿ ಐವರು ಪ್ರವಾಸಿಗರು ಸಿಲುಕಿಹಾಕಿಕೊಂಡಿದ್ದು ಮಳೆ ಸಂಬಂಧಿ ಅವಘಡಗಳಿಗೆ ಮೃತಪಟ್ಟವರ ಸಂಖ್ಯೆ 65ಕ್ಕೇರಿದ್ದು, 7 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ ಮಳೆಯ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದ ದಿನ, ಬಾಗೇಶ್ವರ ಜಿಲ್ಲೆಯ ಕಪ್‌ಕೋಟ್‌ನ ಸುಂದರಧುಂಗಾ ಹಿಮನದಿಯ ಬಳಿ ಪ್ರವಾಸಿಗರ ಸಾವಿನ ಬಗ್ಗೆ ದೃಢಪಡಿಸಲಾಗಿದೆ. 

ನಿನ್ನೆಯವರೆಗೆ ರಾಜ್ಯದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆ 60 ಆಗಿತ್ತು. ಕಳೆದ 24 ಗಂಟೆಗಳಲ್ಲಿ ಐವರು ಮೃತಪಟ್ಟವರಲ್ಲದೆ ಒಬ್ಬ ಪ್ರವಾಸಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರನ್ನು ರಕ್ಷಿಸಲಾಗಿದೆ.

ಬಾಗೇಶ್ವರದ ಎತ್ತರದ ಪ್ರದೇಶದಲ್ಲಿ ಸುಮಾರು 65 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಮತ್ತು ಇನ್ನೂ ಉಳಿದಿರುವವರನ್ನು ಸುರಕ್ಷಿತವಾಗಿ ಕರೆತರಲು ರಕ್ಷಣಾ ತಂಡಗಳು ಕೆಲಸ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಲಿಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ ಅಮಿತ್ ಶಾ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ಎಚ್ಚರಿಕೆಯು ಉತ್ತರಾಖಂಡದಲ್ಲಿ ಹಾನಿಯನ್ನು ತಡೆಯಲು ಸಹಾಯ ಮಾಡಿತು.

ಸಂಪರ್ಕವನ್ನು ಪುನಃಸ್ಥಾಪಿಸಲು ಮತ್ತು ದುರ್ಬಲ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳ ನಡುವೆ ಅತ್ಯಂತ ಹಾನಿಗೊಳಗಾದ ಕುಮಾವಾನ್ ಪ್ರದೇಶದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ ಎಂದಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 7 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದಾರೆ. 

ಹಾನಿಗೊಳಗಾದ ರಸ್ತೆಗಳು ಮತ್ತು ಸೇತುವೆಗಳ ಜಾಲವನ್ನು ಪುನಃಸ್ಥಾಪಿಸುವುದು ಮತ್ತು ಜನರನ್ನು ಸುರಕ್ಷತೆಗೆ ಸ್ಥಳಾಂತರಿಸುವುದು ಈ ಸಮಯದಲ್ಲಿ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com