ಕಂಗನಾ ರಾಣಾವತ್
ಕಂಗನಾ ರಾಣಾವತ್

'ಮಾನನಷ್ಟ ಮೊಕದ್ದಮೆ ಕೇಸಿನಲ್ಲಿ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ವರ್ತಿಸಿದ್ದಾರೆ': ನಟಿ ಕಂಗನಾ ರಾನಾವತ್ ಮನವಿ ತಿರಸ್ಕೃತ

ಬಾಲಿವುಡ್ ನಟಿ ಕಂಗನಾ ರನಾವತ್ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು 'ವಿವೇಚನೆಯಿಂದ' ವರ್ತಿಸಿದ್ದು, ನಟಿ ವಿರುದ್ಧ ಯಾವುದೇ ಪಕ್ಷಪಾತವನ್ನು ತೋರಿಸಿಲ್ಲ ಎಂದು ಮುಂಬೈ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ವಿರುದ್ಧ ಗೀತರಚನೆಕಾರ ಜಾವೇದ್ ಅಖ್ತರ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು 'ವಿವೇಚನೆಯಿಂದ' ವರ್ತಿಸಿದ್ದು, ನಟಿ ವಿರುದ್ಧ ಯಾವುದೇ ಪಕ್ಷಪಾತವನ್ನು ತೋರಿಸಿಲ್ಲ ಎಂದು ಮುಂಬೈಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಕಾನೂನು ಕ್ರಮ ಅನುಸರಿಸುವ ಮೂಲಕ ನ್ಯಾಯಾಲಯವು ಪ್ರಕರಣವನ್ನು ಮುಂದುವರೆಸಿದ ಕಾರಣ, ಇದು ಅರ್ಜಿದಾರರ ವಿರುದ್ಧ ಪಕ್ಷಪಾತ ಎಂದು ಅರ್ಥವಲ್ಲ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಟಿ ದಾಂಡೆ ತನ್ನ ಆದೇಶದಲ್ಲಿ ಹೇಳಿದ್ದು, ಪ್ರಕರಣವನ್ನು ವರ್ಗಾಯಿಸಲು ಕೋರಿದ ಕಂಗನಾ ರನಾವತ್ ಮನವಿಯನ್ನು ತಿರಸ್ಕರಿಸಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮೊನ್ನೆ 21ರಂದು ರನಾವತ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದು ಆದೇಶದ ವಿವರ ಇಂದು ಲಭ್ಯವಾಗಿದೆ. 

ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ವಿಚಾರಣೆಯಲ್ಲಿ ತಮಗೆ ನಂಬಿಕೆ ಹೋಗಿರುವುದರಿಂದ ಕೇಸಿನ ವಿಚಾರಣೆಯನ್ನು ವರ್ಗಾಯಿಸಬೇಕೆಂದು ಕಳೆದ ತಿಂಗಳು ನಟಿ ಕಂಗನಾ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ತಮ್ಮ ಬಗ್ಗೆ ಪಕ್ಷಪಾತ ಹೊಂದಿದೆ ಎಂದು ಸಹ ನಟಿ ಆರೋಪಿಸಿದ್ದರು. 

ಆದರೆ ನ್ಯಾಯಾಧೀಶೆ ದಾಂಡೆ ತಮ್ಮ ಆದೇಶದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, 10 ನೇ ನ್ಯಾಯಾಲಯ, ಅಂಧೇರಿ, ತನ್ನ ಎಲ್ಲಾ ವಿನಾಯಿತಿ ಅರ್ಜಿಗಳನ್ನು ನೀಡುವ ಮೂಲಕ ಆರೋಪಿಗೆ ಗೈರು ಹಾಜರಾಗಲು ಸಾಕಷ್ಟು ಅವಕಾಶ ನೀಡಿದೆ. ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ಎಲ್ಲಾ ಆದೇಶಗಳನ್ನು ನಾನು ಪರಿಶೀಲಿಸಿದ್ದೇನೆ. ಅವರು ನ್ಯಾಯಯುತವಾಗಿ ಆದೇಶಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಇದಲ್ಲದೆ, ಅಂಧೇರಿ ನ್ಯಾಯಾಲಯವು ನೀಡಿದ ಆದೇಶವನ್ನು ಸೆಷನ್ಸ್ ನ್ಯಾಯಾಲಯವು ದೃಢಪಡಿಸಿದೆ. ಇದಲ್ಲದೆ, ಮ್ಯಾಜಿಸ್ಟ್ರೇಟ್ ತನ್ನ ವಿರುದ್ಧ ಆರಂಭಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರನಾವತ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನ್ಯಾಯಯುತವಾಗಿ ವರ್ತಿಸಿದ್ದಾರೆ ಮತ್ತು ಅರ್ಜಿದಾರರ ವಿರುದ್ಧ ಪಕ್ಷಪಾತ ಹೊಂದಿಲ್ಲ ಎಂದು ಇದು ತೋರಿಸುತ್ತದೆ ಎಂದು ಸಿಎಂಎಂ ನ್ಯಾಯಾಲಯ ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com