ಸಂಜೆ 7 ಕ್ಕೆ ಪ್ರಧಾನಿ ಮೋದಿ- ಕೋವಿಡ್ ಲಸಿಕೆ ಉತ್ಪಾದಕರ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅ.23 ರಂದು ಭಾರತದ ಕೋವಿಡ್-19 ಲಸಿಕೆ ತಯಾರಕರನ್ನು ಭೇಟಿ ಮಾಡಲಿದ್ದಾರೆ. 
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅ.23 ರಂದು ಭಾರತದ ಕೋವಿಡ್-19 ಲಸಿಕೆ ತಯಾರಕರನ್ನು ಭೇಟಿ ಮಾಡಲಿದ್ದಾರೆ. ಭಾರತದಲ್ಲಿ 7 ಲಸಿಕೆ ತಯಾರಕ ಸಂಸ್ಥೆಗಳಿದ್ದು, ಈ ಸಂಸ್ಥೆಗಳ ಮುಖ್ಯಸ್ಥರನ್ನು ಮೋದಿ ಭೇಟಿ ಮಾಡಲಿದ್ದಾರೆ. 100 ಕೋಟಿ ಲಸಿಕೆಗಳನ್ನು ಭಾರತ ನೀಡಿರುವ ಸಾಧನೆಯ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ.

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ.ರೆಡ್ಡೀಸ್ ಲ್ಯಾಬರೋಟರಿ, ಝೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಜೆನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯಾ ಬಯೋಟೆಕ್ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಸಂಸ್ಥೆಗಳಾಗಿವೆ.

ಭಾರತದಲ್ಲಿ ಇನ್ನು ಉಳಿದ ಅರ್ಹ ಮಂದಿಗೆ ಸಾಧ್ಯವಾದಷ್ಟೂ ಬೇಗ ಲಸಿಕೆ ನೀಡುವ ಮಾರ್ಗಗಳ ಬಗ್ಗೆ ಹಾಗೂ ವ್ಯಾಕ್ಸಿನ್ ಫಾರ್ ಆಲ್ ಎಂಬ ತತ್ವದ ಅಡಿಯಲ್ಲಿ ಇತರ ದೇಶಗಳಿಗೂ ಸಹಾಯ ಮಾಡುವ ಬಗ್ಗೆ ಮೋದಿ ಈ ಸಭೆಯಲ್ಲಿ ಚರ್ಚಿಸಲಿದ್ದಾರೆ.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹಾಗೂ ಆರೋಗ್ಯ ಇಲಾಖೆಯ ಕೇಂದ್ರ ರಾಜ್ಯ ಖಾತೆ ಸಚಿವರಾದ ಭಾರತಿ ಪ್ರವೀಣ್ ಪವಾರ್ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com