ಆನ್ ಲೈನ್ ತರಗತಿಗಳ ಕುರಿತು ಶೇ.43 ಪ್ರತಿಶತ ಶಿಕ್ಷಕರು ಅಸಮಾಧಾನ: ಸಮೀಕ್ಷೆಯಿಂದ ಬಹಿರಂಗ

ಸಮೀಕ್ಷೆ ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ. ಆನ್ ಲೈನ್ ಶಿಕ್ಷಣದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಕರು ಅದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಶೇ.43 ಪ್ರತಿಶತ ಶಿಕ್ಷಕರು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅನಿವಾರ್ಯವಾಗಿ ಅಳವಡಿಸಿಕೊಳ್ಳಬೇಕಾಗಿ ಬಂದ ಆನ್ ಲೈನ್ ತರಗತಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿ ಮಕ್ಕಳ ಹಕ್ಕುಗಳ ಆಯೋಗ ಈ ಕುರಿತಾಗಿ ಸಮೀಕ್ಷೆ ನಡೆಸಿತ್ತು. 

ಸಮೀಕ್ಷೆ ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ. ಆನ್ ಲೈನ್ ಶಿಕ್ಷಣದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಕರು ಅದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಮಕ್ಕಳ ಹಾಜರಾತಿ ಅವುಗಳಲ್ಲಿ ಪ್ರಮುಖವಾದುದು. ಆನ್ ಲೈನ್ ತರಗತಿಗಳಲ್ಲಿ ಗಣನೀಯ ಪ್ರಮಾಣದ ಮಕ್ಕಳು ಗೈರಾಗುತ್ತಿದ್ದರು. 

ಮತ್ತೊಂದು ಮುಖ್ಯ ಸಮಸ್ಯೆ ಎಂದರೆ ವಿದ್ಯಾರ್ಥಿಗಳ ಗಮನ ಕುರಿತಾದದ್ದು. ಬಹಳಷ್ಟು ವಿದ್ಯಾರ್ಥಿಗಳು ಆನ್  ಲೈನ್ ತರಗತಿಗಳಿಗೆ ಹಾಜರಾದರೂ ಅವರ ಗಮನ ಬೇರೆಲ್ಲೋ ಇರುತ್ತಿತ್ತು ಎಂದು ಶಿಕ್ಷಕರು ದೂರಿದ್ದಾರೆ. 

ಆನ್ ಲೈನ್ ತರಗತಿಗಳಲ್ಲಿ ಪಾಲಕರ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳ ಜೊತೆಯೇ ಇದ್ದುದರಿಂದ ಶಿಕ್ಷಕರ ಕೆಲಸವನ್ನು ಪಾಲಕರು ಮಾಡಬೇಕಾಗಿ ಬಂದಿದ್ದಾಗಿ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com