ಕಂಪನಿಗಳ ಮೇಲಿನ ದಾಳಿ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ: ಫ್ಯಾಬ್ ಇಂಡಿಯಾ ವಿವಾದದ ಬಗ್ಗೆ ಕಾಂಗ್ರೆಸ್

ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಕೆಲವು ಕಂಪನಿಗಳು ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದು, ಬಿಜೆಪಿ ಸಂಸದರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. 
ಈಗಾಗಲೇ ಹಿಂಪಡೆಯಲಾಗಿರುವ ಫ್ಯಾಬ್ ಇಂಡಿಯಾ ಜಾಹಿರಾತಿನ ಪೋಸ್ಟರ್ ಚಿತ್ರ
ಈಗಾಗಲೇ ಹಿಂಪಡೆಯಲಾಗಿರುವ ಫ್ಯಾಬ್ ಇಂಡಿಯಾ ಜಾಹಿರಾತಿನ ಪೋಸ್ಟರ್ ಚಿತ್ರ

ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಕೆಲವು ಕಂಪನಿಗಳು ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದು, ಬಿಜೆಪಿ ಸಂಸದರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. 

ಬಿಜೆಪಿ ನಾಯಕರ ನಡೆಯಿಂದಾಗಿ ಕಂಪನಿಗಳ ಹೂಡಿಕೆಯ ಮೇಲೆ ಪರಿಣಾಮ ಉಂಟಾಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಆತಂಕವಾಗಿದೆ.

ಆದಾಗ್ಯೂ ಬಿಜೆಪಿ ಸಂಸದರ ಆಕ್ಷೇಪಗಳನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ.

ದೀಪಾವಳಿ ಹಬ್ಬವನ್ನು ಜಶ್ನ್-ಎ- ರಿವಾಜ್ ಎಂಬ ಹೆಸರಿನಲ್ಲಿ ಉಲ್ಲೇಖಿಸಿ ಹಿಂದೂಗಳ ಸಂಸ್ಕೃತಿಯೇ ಇಲ್ಲದ ಜಾಹಿರಾತನ್ನು ಪ್ರಕಟಿಸಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಫ್ಯಾಬ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಬೆನ್ನಲ್ಲೇ ನಟ ಆಮೀರ್ ಖಾನ್ ನಟಿಸಿರುವ ಸಿಯೆಟ್ ಟೈರ್ ಗಳ ಜಾಹಿರಾತಿನಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಕಾರಣಕ್ಕೆ ಸಿಯೆಟ್ ಎಂಡಿ ಹಾಗೂ ಸಿಇಒ ಅನಂತ್ ವರ್ಧನ್ ಗೋಯೆಂಕಾಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಪತ್ರ ಬರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

"ಈ ರೀತಿ ಬಿಜೆಪಿ ನಾಯಕರು ಕಂಪನಿಗಳ ಜಾಹಿರಾತುಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದರೆ, ಇದು ಕೈಗಾರಿಕೋದ್ಯಮಿಗಳು, ಉದ್ಯಮಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತದೆ. ಯಾವುದೇ ಜಾಹಿರಾತು ತಪ್ಪಾಗಿ ಭಾವನೆಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿದ್ದರೆ ಅದರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬಹುದು" ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. 

"ಆದರೆ ಬಿಜೆಪಿ ನಾಯಕರು ಕೈಗಾರಿಕೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿದ್ದಾರೆ" ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ಎಫ್ ಕೆಸಿಸಿಐ ನ ಅಧ್ಯಕ್ಷ ಪೆರಿಕಲ್ ಸುಂದರ್ ಈ ಬಗ್ಗೆ ಮಾತನಾಡಿದ್ದು, ಸಂಸ್ಥೆಗಳು ತಮ್ಮ ಜಾಹಿರಾತುಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಹಾಗೂ ವಿವಾದಗಳಿಂದ ದೂರ ಇರಬೇಕೆಂದು ಹೇಳಿದ್ದಾರೆ.

ಯಾವುದೇ ಜಾಹಿರಾತು ವಿವಾದ ಉಂಟುಮಾಡಿದಲ್ಲಿ ಅದನ್ನು ಮಂದಿ ಟಾರ್ಗೆಟ್ ಮಾಡುತ್ತಾರೆ, ದೊಡ್ಡ ವಿಷಯವಾಗಲಿದೆ. ಇದರಿಂದ ಉದ್ಯಮಕ್ಕೆ ಹಾನಿಯುಂಟಾಗಲಿದೆ ಎಂದು ಪೆರಿಕಲ್ ಸುಂದರ್ ಅಭಿಪ್ರಾಯಪಟ್ಟಿದ್ದಾರೆ.

ಗಣೇಶ್ ಕಾರ್ಣಿಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕಂಪನಿಗಳು ನಿರ್ದಿಷ್ಟ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿವೆ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವುದು ತಪ್ಪು" ಎನ್ನುತ್ತಾರೆ ಅವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com