ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ: ಚೀನಾಗೆ ಡವ ಡವ

ಖಂಡದಿಂದ ಖಂಡಕ್ಕೆ ಹಾರುವ ಕ್ಷಿಪಣಿ ಹೊಂದಿರುವ 5ನೇ ದೇಶ ಭಾರತ ಎನ್ನುವ ಹೆಸರಿಗೆ ಪಾತ್ರವಾಗಿದೆ. 5,000 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.
ಉಡ್ಡಯನದ ದೃಶ್ಯ
ಉಡ್ಡಯನದ ದೃಶ್ಯ

ನವದೆಹಲಿ: ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಕ್ಷಿಪಣಿ ಅಗ್ನಿ-5 ರ ಪರೀಕ್ಷಾರ್ಥ ಉಡಾವಣೆಯನ್ನು ಡಿ ಆರ್ ಡಿ ಒ ಯಶಸ್ವಿಯಾಗಿ ನೆರವೇರಿಸಿದೆ. 

ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬುಧವಾರ ಕ್ಷಿಪಣಿ ಅಗ್ನಿ-5 ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 5,000 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಈ ಕ್ಷಿಪಣಿ ಖಂಡಾಂತರ ಕ್ಷಿಪಣಿಯಾಗಿದ್ದು ಖಂಡದಿಂದ ಖಂಡಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿ 50 ಟನ್ ತೂಕ ಹೊಂದಿದೆ. ಖಂಡದಿಂದ ಖಂಡಕ್ಕೆ ಹಾರುವ ಕ್ಷಿಪಣಿ ಹೊಂದಿರುವ 5ನೇ ದೇಶ ಭಾರತ ಎನ್ನುವ ಹೆಸರಿಗೆ ಪಾತ್ರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com