ಭಾರತ್ ಬಯೋಟೆಕ್ ನಿಂದ ಮತ್ತಷ್ಟು ಸ್ಪಷ್ಟನೆ ಕೇಳಿದ ಡಬ್ಲ್ಯುಹೆಚ್ಒ

ಜಾಗತಿಕ ಮಟ್ಟದಲ್ಲಿ ಲಸಿಕೆಗಳ ತುರ್ತು ಬಳಕೆ ಪಟ್ಟಿಗೆ ಕೋವ್ಯಾಕ್ಸಿನ್ ನ್ನು ಸೇರಿಸುವುದಕ್ಕಾಗಿ ಡಬ್ಲ್ಯುಹೆಚ್ಒ ಭಾರತ್ ಬಯೋಟೆಕ್ ನಿಂದ ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದೆ. 
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

ವಿಶ್ವಸಂಸ್ಥೆ: ಜಾಗತಿಕ ಮಟ್ಟದಲ್ಲಿ ಲಸಿಕೆಗಳ ತುರ್ತು ಬಳಕೆ ಪಟ್ಟಿಗೆ ಕೋವ್ಯಾಕ್ಸಿನ್ ನ್ನು ಸೇರಿಸುವುದಕ್ಕಾಗಿ ಡಬ್ಲ್ಯುಹೆಚ್ಒ ಭಾರತ್ ಬಯೋಟೆಕ್ ನಿಂದ ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದೆ. 

ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮುನ್ನ ಅಂತಿಮ ಹಂತದ ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸುವುದಕ್ಕೆ ಈ ಹೆಚ್ಚುವರಿ ಸ್ಪಷ್ಟನೆಗಳನ್ನು ಡಬ್ಲ್ಯುಹೆಚ್ಒ ನ ತಾಂತ್ರಿಕ ಸಲಹಾ ತಂಡ ಕೇಳಿದೆ.

"ನಿರೀಕ್ಷಿತ ಸಮಯದಲ್ಲಿ ಡೇಟಾ ಲಭ್ಯವಾದಲ್ಲಿ ನವೆಂಬರ್ 3ಕ್ಕೆ  ಅಂತಿಮ ಮೌಲ್ಯಮಾಪನ ನಡೆಸಲು ಡಬ್ಲ್ಯುಹೆಚ್ಒ ತಾಂತ್ರಿಕ ಸಲಹಾ ಸಮಿತಿ ಮತ್ತೊಮ್ಮೆ ಸೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಸೆ.27 ರಂದೂ ಸಹ ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ್ ಬಯೋಟೆಕ್ ಹೆಚ್ಚುವರಿ ಮಾಹಿತಿಯನ್ನು ನೀಡಿತ್ತು. ಕೋವ್ಯಾಕ್ಸಿನ್ ನ್ನು ಅಭಿವೃದ್ಧಿಪಡಿಸಿದ್ದು, ಐಸಿಎಂಆರ್ ಸಹಯೋಗದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com