
ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನ ಹತ್ಯೆಯಾಗಿದೆ.
ಬರಮುಲ್ಲಾ ಜಿಲ್ಲೆಯ ಚೆರ್ದರಿಯಲ್ಲಿ ಸೇನೆಯ ಗಸ್ತುಪಡೆ ಮತ್ತು ಪೊಲೀಸರ ಮೇಲೆ ಉಗ್ರರು ಗುಂಡಿನ ಮಳೆಗೈಯಲು ಆರಂಭಿಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದಾಗ ಓರ್ವ ಉಗ್ರ ಹತ್ಯೆಯಾಗಿದ್ದಾನೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಸ್ಥಳದಿಂದ ಪಿಸ್ತೂಲ್, ಸ್ಫೋಟಕ ವಸ್ತು ಮತ್ತು ಒಂದು ಹ್ಯಾಂಡ್ ಗ್ರೆನೇಡ್ ಸಿಕ್ಕಿದೆ.
ಮೃತ ಉಗ್ರ ಹೈಬ್ರಿಡ್ ವಿಧದವನಾಗಿದ್ದು ಆತನನ್ನು ಕುಲ್ಗಾಮ್ ಜಿಲ್ಲೆಯ ಜಾವೇದ್ ಅ ವಾನಿ ಎಂದು ಗುರುತಿಸಲಾಗಿದೆ. ಕಳೆದ ಅಕ್ಟೋಬರ್ 20ರಂದು ಹತ್ಯೆಗೀಡಾದ ಉಗ್ರ ಗುಲ್ಜಾರ್ ಗೆ ಬಿಹಾರ ಮೂಲದ ಇಬ್ಬರು ಕೂಲಿಕಾರ್ಮಿಕರನ್ನು ಹತ್ಯೆ ಮಾಡಲು ಸಹಾಯ ಮಾಡಿದ್ದ ಎಂದು ಕಾಶ್ಮೀರ ವಲಯ ಪೊಲೀಸ್ ಮಹಾ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಬರಮುಲ್ಲಾ ಜಿಲ್ಲೆಯಲ್ಲಿ ಅಂಗಡಿಯೊಬ್ಬರ ಮೇಲೆ ಗುರಿಯಿಟ್ಟು ದಾಳಿ ನಡೆಸಲು ವಾನಿ ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
#Terrorists fired on ADP of Army and Police in Cherdari, #Baramulla. Alert parties retaliated and 1 terrorist killed. #Identification is being #ascertained. 01 pistol, 01 loaded magazine & 01 Pak grenade was recovered from his possession.@JmuKmrPolice
— Kashmir Zone Police (@KashmirPolice) October 28, 2021