ಸ್ಕೂಲ್ ಬಸ್ ಅಡಿ ಸಿಕ್ಕು ನಜ್ಜುಗುಜ್ಜಾದ 2 ವರ್ಷದ ಹೆಣ್ಣು ಮಗು: ಚಲಿಸುತ್ತಿದ್ದ ಬಸ್ ನಿಂದಲೇ ಚಾಲಕ ಪರಾರಿ

ನತದೃಷ್ಟ ತಂದೆ ತನ್ನ ಹಿರಿಯ ಮಗನನ್ನು ಶಾಲೆ ಬಸ್ ನಿಂದ ಕರೆ ತರಲು ಹೊರಬಂದಿದ್ದರು. ಅದೇ ವೇಳೆ 2 ವರ್ಷದ ಅವರ ಪುಟ್ಟ ಮಗಳು ಯಶಿಕಾ ಹಿಂಬಾಲಿಸಿಬಂದಿದ್ದಳು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರ್ವಾನಿ: ಸ್ಕೂಲ್ ಬಸ್ ಗೆ ಸಿಕ್ಕು 2 ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಗಂಧವಲ್ ಎಂಬಲ್ಲಿ ನಡೆದಿದೆ. 

ನತದೃಷ್ಟ ತಂದೆ ತನ್ನ ಹಿರಿಯ ಮಗನನ್ನು ಶಾಲೆ ಬಸ್ ನಿಂದ ಕರೆ ತರಲು ಹೊರಬಂದಿದ್ದರು. ಅದೇ ವೇಳೆ 2 ವರ್ಷದ ಅವರ ಪುಟ್ಟ ಮಗಳು ಯಶಿಕಾ ಹಿಂಬಾಲಿಸಿಬಂದಿದ್ದಳು. ಇತ್ತ ತಂದೆ ಸ್ಕೂಲ್ ಬಸ್ ಬಾಗಿಲಿನಿಂದ ತಮ್ಮ ಮಗನನ್ನು ಇಳಿಸುತ್ತಿದ್ದರೆ ಆತ್ತ ಯಶಿಕಾ ಸ್ಕೂಲ್ ಬಸ್ ಎದುರು ಹೋಗಿ ನಿಂತಿದ್ದಳು.

ಆಕೆ ಬಸ್ ಮುಂದುಗಡೆ ಇರುವುದು ಯಾರಿಗೂ ತಿಳಿಯಲೇ ಇಲ್ಲ. ಮಕ್ಕಳು ಬಸ್ ನಿಂದ ಇಳಿದ ನಂತರ ಬಸ್ ಚಾಲಕ ಬಸ್ ಅನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಿಸಿದ್ದಾನೆ. ಆ ವೇಳೆಗೆ ಅನಾಹುತ ಸಂಭವಿಸಿ ಹೋಗಿತ್ತು. ಬಸ್ ಅಡಿ ಸಿಕ್ಕ ಮಗುವಿನ ದೇಹ ನಜ್ಜುಗುಜ್ಜಾಗಿತ್ತು. 

ಸುತ್ತಮುತ್ತಲಿನ ಸಾರ್ವಜನಿಕರು ಬಸ್ ಎದುರು ಮಗು ಇರುವುದಾಗಿ ಕಿರುಚುತ್ತಾ ಮುನ್ನುಗ್ಗಿ ಬಂದರು. ಆ ವೇಳೆಗೆ ಆತಂಕಗೊಂಡ ಬಸ್ ಚಾಲಕ ಬಸ್ ಚಲಿಸುತ್ತಿರುವಂತೆಯೇ ಡೋಋ ತೆಗೆದು ಹಾರಿ ಪರಾರಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com