ಆರ್ಯನ್ ಖಾನ್ ಡ್ರಗ್ ಪ್ರಕರಣ ಪ್ರಮುಖ ಸಾಕ್ಷಿ ಕಿರಣ್ ಗೋಸಾವಿ 8 ದಿನಗಳ ಕಾಲ ಪೊಲೀಸ್ ವಶಕ್ಕೆ

ಎನ್ ಸಿ ಬಿ ಆರ್ಯನ್ ಖಾನ್ ರನ್ನು ವಶಕ್ಕೆ ಪಡೆದ ದಿನಗಳಲ್ಲೇ ಗೋಸಾವಿ, ಆರ್ಯನ್ ಖಾನ್ ಜೊತೆ ಇರುವ ಸೆಲ್ಫಿ ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು.
ಕಿರಣ್ ಗೋಸಾವಿ, ಆರ್ಯನ್ ಖಾನ್
ಕಿರಣ್ ಗೋಸಾವಿ, ಆರ್ಯನ್ ಖಾನ್

ಮುಂಬೈ: ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಕಿರಣ್ ಗೋಸಾವಿಯನ್ನು ಪುಣೆ ನ್ಯಾಯಾಲಯ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ. 

ಎನ್ ಸಿ ಬಿ ಆರ್ಯನ್ ಖಾನ್ ರನ್ನು ವಶಕ್ಕೆ ಪಡೆದ ದಿನಗಳಲ್ಲೇ ಗೋಸಾವಿ, ಆರ್ಯನ್ ಖಾನ್ ಜೊತೆ ಇರುವ ಸೆಲ್ಫಿ ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಒಡನೆಯೇ ಪುಣೆಯ ಪೊಲೀಸರು 2018ರ ಹಣ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗೋಸಾವಿ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು.

2018ರ ಹಣವಂಚನೆ ಪ್ರಕರಣದಡಿ ಬಂಧಿತನಾಗಿರುವ ಗೋಸಾವಿಯನ್ನು ಪುಣೆ ನ್ಯಾಯಾಲಯ 8 ದಿನಗಳ ಕಾಲ ಪೊಲಿಸ್ ವಶಕ್ಕೆ ಒಪ್ಪಿಸಿದೆ.

ಗೋಸಾವಿ ಬಳಿ ಚಾಲಕನಾಗಿದ್ದ ಪ್ರಭಾಕರ್ ಎಂಬಾತ ಆರ್ಯನ್ ಖಾನ್ ಹಡಗಿನಿಂದ ಬಂಧನವಾದ ನಂತರ ಗೋಸಾವಿ ವ್ಯಕ್ತಿಯಿಂದ 50 ಲಕ್ಷ ರೂ. ಹಣ ಪಡೆಯುವುದನ್ನು ನೋಡಿದ್ದಾಗಿ ಹೇಳಿದ್ದ. ಅಲ್ಲದೆ ವಾಂಖಡೆ ಹಾಗೂ ಆತನ ಸಹವರ್ತಿಗಳು ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ. ಬೇಡಿಕೆ ಇಟ್ಟಿದ್ದಾಗಿ ಬಾಯಿಬಿಟ್ಟಿದ್ದ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com