ಭಯೋತ್ಪಾದನೆ ಪ್ರಕರಣಗಳಲ್ಲಿ ಬೇಕಾಗಿರುವ 25 ಭಾರತೀಯರು ಅಫ್ಘಾನಿಸ್ತಾನದಲ್ಲಿದ್ದಾರೆ: ಗುಪ್ತಚರ ಮಾಹಿತಿ

ಭಯೋತ್ಪಾದನೆಯ ಪ್ರಕರಣಗಳಲ್ಲಿ ಬೇಕಾಗಿರುವ 25 ಭಾರತೀಯರು ಅಫ್ಘಾನಿಸ್ತಾನದಲ್ಲಿದ್ದಾರೆ ಎಂದು ಗುಪ್ತಚರ ಮಾಹಿತಿ ಮೂಲಕ ತಿಳಿದುಬಂದಿದೆ.
ತಾಲಿಬಾನ್ ಉಗ್ರರು
ತಾಲಿಬಾನ್ ಉಗ್ರರು

ನವದೆಹಲಿ: ಭಯೋತ್ಪಾದನೆಯ ಪ್ರಕರಣಗಳಲ್ಲಿ ಬೇಕಾಗಿರುವ 25 ಭಾರತೀಯರು ಅಫ್ಘಾನಿಸ್ತಾನದಲ್ಲಿದ್ದಾರೆ ಎಂದು ಗುಪ್ತಚರ ಮಾಹಿತಿ ಮೂಲಕ ತಿಳಿದುಬಂದಿದೆ.

ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಈ ಭಯೋತ್ಪಾದಕರಿದ್ದು, ಇವರನ್ನು ಈ ಹಿಂದೆ ಅಫ್ಘನ್ ಪಡೆಗಳು ಬಂಧಿಸಿದ್ದವು. ಆದರೆ ನಂತರ ದೇಶ ತಾಲೀಬಾನ್ ವಶವಾದ ಬಳಿಕ ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಐಎಸ್-ಕೆ ಉಗ್ರ ಸಂಘಟನೆ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಗೆ ಈ ಭಾರತೀಯರು ಸೇರ್ಪಡೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ 25 ಭಾರತೀಯರ ಮೇಲೆ ಭದ್ರತಾ ಪಡೆಗಳು ಕಣ್ಗಾವಲಿಟ್ಟಿದ್ದು, ಹೆಚ್ಚಿನವರು ಕೇರಳದ ಮೂಲದವರಾಗಿದ್ದಾರೆ. ಈ ಉಗ್ರರು ಒಸಾಮಾ ಬಿನ್ ಲ್ಯಾಡನ್ ನ ಭದ್ರತಾ ಅಧಿಕಾರಿಯಾಗಿದ್ದ ಅಮಿನ್ ಅಲ್ ಹಕ್ ನ ತವರಾದ ನಂಗರ್ಹಾರ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು ಈ 25 ಮಂದಿಯ ಪೈಕಿ ಈಗ ಎಷ್ಟು ಮಂದಿ ಜೀವ ಸಹಿತ ಇದ್ದಾರೆ ಎಂಬುದು ತಿಳಿದಿಲ್ಲ. 

ತಾಲೀಬಾನ್ ಬಿಡುಗಡೆ ಮಾಡಿರುವ ಉಗ್ರರ ಪೈಕಿ ಐಎಸ್-ಕೆ ನೇಮಕ ಮಾಡಿಕೊಂಡಿದ್ದ ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಐಜಾಜ್ ಅಹಂಗರ್ ಕೂಡಾ ಇರಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

25 ಶಂಕಿತರ ಪೈಕಿ ಅಬು ಖಾಲಿದ್ ಅಲ್-ಹಿಂದಿ ಅಲಿಯಾಸ್ ಮೊಹಮ್ಮದ್ ಸಾಜಿದ್ ಕುತಿರುಲ್ಮಲ್( ಕಾಸರಗೋಡಿನ ಅಂಗಡಿ ಮಾಲಿಕ) ಕೂಡ ಇದ್ದು ಈತ 2016 ರ ಎನ್ಐಎ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ.

ಕಾಬೂಲ್ ನಲ್ಲಿ ಕಳೆದ ವರ್ಷ ಸಿಖ್ ಮಂದಿರದ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿಯೂ ಈತ ಶಂಕಿತ ಆರೋಪಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com