ಎಲ್ ಪಿ ಜಿ ಸಿಲಿಂಡರ್ ಬೆಲೆಯೇರಿಸಿದ ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ

ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ದೇಶದ ನಾಲ್ಕು ಪ್ರಮುಖ ಮೆಟ್ರೊ ನಗರಗಳಲ್ಲಿನ ಎಲ್ ಪಿ ಜಿ ಸಿಲಿಂಡರುಗಳ ಬೆಲೆ ಏರಿಕೆಯಾಗಿರುವ ಅಂಕಿ ಅಂಶಗಳನ್ನು ರಾಹುಲ್ ತಮ್ಮ ಟ್ವೀಟ್ ನಲ್ಲಿ ನಮೂದಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಏರಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ನಾಗರಿಕರು ಈ ಅನ್ಯಾಯದ ವಿರುದ್ಧ ಒಗ್ಗಟ್ಟಾಗುತ್ತಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹಾಗೂ ಎಲ್ ಪಿ ಜಿ ದರ ಏರಿಸಿರುವುದನ್ನು ಖಂಡಿಸಿದ್ದು, ಶೀಘ್ರದಲ್ಲೇ ಅವುಗಳ ಮೇಲಿನ ತೆರಿಗೆಯನ್ನು ಸಡಿಲಿಸಿ ಬೆಲೆ ಇಳಿಸ ಬೇಕು ಎಂದು ಒತ್ತಾಯಿಸಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಜನಸಾಮಾನ್ಯರು ಖಾಲಿ ಹೊಟ್ಟೆಯಲ್ಲಿ ಮಗುವಂತೆ ಮಾಡುತ್ತಿರುವ ವ್ಯಕ್ತಿ ತನ್ನ ಸ್ನೇಹಿತರ ಹಿಂದೆ ಅವಿತುಕೊಂಡಿದ್ದಾರೆ. ದೇಶ ಈ ಅನ್ಯಾಯದ ವಿರುದ್ಧ ಸಂಘಟಿತಗೊಳ್ಳುತ್ತಿದೆ.' ಎಂದಿದ್ದಾರೆ.

ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ದೇಶದ ನಾಲ್ಕು ಪ್ರಮುಖ ಮೆಟ್ರೊ ನಗರಗಳಲ್ಲಿನ ಎಲ್ ಪಿ ಜಿ ಸಿಲಿಂಡರುಗಳ ಬೆಲೆ ಏರಿಕೆಯಾಗಿರುವ ಅಂಕಿ ಅಂಶಗಳನ್ನು ರಾಹುಲ್ ತಮ್ಮ ಟ್ವೀಟ್ ನಲ್ಲಿ ನಮೂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com