ಕಾಲೇಜು ಪದವೀಧರ ಮಹಿಳೆಯರಲ್ಲಿ ಸಿಸೇರಿಯನ್ ಪ್ರಮಾಣ ನಾಲ್ಕು ಪಟ್ಟು ಹೆಚ್ಚು

ಅತಿ ಹೆಚ್ಚು ಸಿಸೇರಿಯನ್ ಪ್ರಮಾಣ ಹೊಂದಿದ ರಾಜ್ಯ ತೆಲಂಗಾಣ(ಶೇ.62.1), ಅತಿ ಕಡಿಮೆ ಸಿಸೇರಿಯನ್ ಪ್ರಮಾಣ ಹೊಂದಿರುವ ರಾಜ್ಯ ಬಿಹಾರ(ಶೇ.10.7).
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಶಿಕ್ಷಣ ಪಡೆಯದ ಮಹಿಳೆಯರಿಗೆ ಹೋಲಿಸಿದರೆ, ಕಾಲೇಜು ಡಿಗ್ರೀ ಹೊಂದಿರುವ ಭಾರತೀಯ ಮಹಿಳೆಯರಲ್ಲಿ ಸಿಸೇರಿಯನ್ ಪ್ರಮಾಣ ನಾಲ್ಕು ಪಟ್ಟು ಹೆಚ್ಚು ಎಂದು ನೂತನ ಸಂಶೋಧನೆಯೊಂದು ಅಚ್ಚರಿಯ ಮಾಹಿತಿ ಹೊರಹಾಕಿದೆ.  

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಈ ಮಾಹಿತಿ ಹೊರಬಿದ್ದಿದೆ. ಈ ಸಮೀಕ್ಷೆಯಲ್ಲಿ ಭಾರತೀಯ ಸಂಶೋಧಕರಲ್ಲದೆ, ಹಾರ್ವರ್ಡ್ ಯೂನಿವರ್ಸಿಟಿ ಮತ್ತು ಕೊರಿಯಾ ಸಂಶೋಧಕರೂ ಪಾಲ್ಗೊಂಡಿದ್ದರು. 

1.36 ಲಕ್ಷ ಮಂದಿಯನ್ನು ಸಮೀಕ್ಷೆಯ ಸಂದರ್ಭ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 36 ರಾಜ್ಯಗಳ, 640 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎನ್ನುವುದು ವಿಶೇಷ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಕಡಿಮೆ(ಶೇ.11.1) ದಾಖಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಡೆಲಿವರಿ ಪ್ರಮಾಣ ಹೆಚ್ಚು(ಶೇ.39.3) ದಾಖಲಾಗಿದೆ.

ಅತಿ ಹೆಚ್ಚು ಸಿಸೇರಿಯನ್ ಪ್ರಮಾಣ ಹೊಂದಿದ ರಾಜ್ಯ ತೆಲಂಗಾಣ(ಶೇ.62.1), ಅತಿ ಕಡಿಮೆ ಸಿಸೇರಿಯನ್ ಪ್ರಮಾಣ ಹೊಂದಿರುವ ರಾಜ್ಯ ಬಿಹಾರ(ಶೇ.10.7).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com