ಮೋದಿ ಸರ್ಕಾರದಿಂದ ಅಸಮರ್ಪಕ ಆರ್ಥಿಕ ನಿರ್ವಹಣೆ: ರಾಹುಲ್ ಗಾಂಧಿ ಆರೋಪ

ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶ ಅಡ್ಡ ಹಾದಿಯತ್ತ ಇದ್ದಾಗ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್, ಭಾರತದ ಕಲ್ಪನೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಹೋರಾಡುವ ನೈತಿಕ ಕರ್ತವ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶ ಗಂಭೀರವಾದ ಅಡ್ಡ ಹಾದಿಯತ್ತ ಇದ್ದಾಗ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್, ಭಾರತದ ಕಲ್ಪನೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಹೋರಾಡುವ ನೈತಿಕ ಕರ್ತವ್ಯವನ್ನು ಹೊಂದಿದೆ ಎಂದು ಗುರುವಾರ ಹೇಳಿದ್ದಾರೆ.

ಇಂದು ವರ್ಚುಯಲ್ ಮೂಲಕ ನಡೆದ ಉತ್ತರ ಕೇರಳ ಜಿಲ್ಲೆಯ ಕಾಂಗ್ರೆಸ್ ಸಮಿತಿ ಕಚೇರಿಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರ ಸ್ಪಷ್ಟವಾಗಿ ದೇಶದ ಆರ್ಥಿಕತೆಯನ್ನು ಅಸಮರ್ಪಕವಾಗಿ ನಿರ್ವಹಿಸಿದೆ. ಕಳೆದ 70 ವರ್ಷದಲ್ಲಿ ಈ ದೇಶದಲ್ಲಿ ಏನು ನಿರ್ಮಾಣ ಮಾಡಲಾಗಿತ್ತೋ ಅದೆಲ್ಲವನ್ನೂ ಇದೀಗ ಕೆಲವೇ ಆಯ್ದು ಮೋದಿ ಸ್ನೇಹಿತರಿಗೆ ನೀಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಖಾಸಗೀಕರಣದ ವಿರೋಧವಿಲ್ಲ ಆದರೆ, ತನ್ನ ಖಾಸಗೀಕರಣದ ಯೋಜನೆಗೆ ತಾರ್ಕಿಕತೆ ಇರುತ್ತದೆ. ನಾವು ಕಾರ್ಯತಂತ್ರದ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಿಲ್ಲ ಉದಾ, ರೈಲ್ವೆ ದೇಶದ ಬೆನ್ನೆಲುಬು ಆಗಿದೆ. ಆದರೆ, ಇದರ ಖಾಸಗೀಕರಣವನ್ನು ವಿರುದ್ಧ ಕಾಂಗ್ರೆಸ್ ವಿರೋದಿಸುತ್ತದೆ ಎಂದು ಅವರು ಹೇಳಿದರು.

ಪ್ರಯಾಣಿಕರ ರೈಲುಗಳು, ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣ, ರಸ್ತೆಗಳು, ಸ್ಟೇಡಿಯಂ ಎಲ್ಲಾ ಕಡೆ ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗೀಕರಣ ಪಾಲುದಾರಿಕೆ ಹಾಗೂ ತೈಲ ಬೆಲೆ ಹೆಚ್ಚಳದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com