ಅನಿವಾರ್ಯ ಎನಿಸಿದ್ದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ಮಾತ್ರ ಗುಂಪಲ್ಲಿ ಭಾಗವಹಿಸಬೇಕು- ಕೇಂದ್ರ ಸರ್ಕಾರ

ಆಗಸ್ಟ್ ತಿಂಗಳ ಕೊನೆಯ ವಾರ ಪ್ರತಿದಿನ ಸರಾಸರಿ 80 ಲಕ್ಷ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಹಬ್ಬಗಳ ಸಂದರ್ಭದಲ್ಲಿ ಅನಿವಾರ್ಯ ಎನಿಸಿದ್ದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ಮಾತ್ರ ಗುಂಪಿನಲ್ಲಿ ಭಾಗವಹಿಸಬೇಕು ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್

ನವದೆಹಲಿ: ಆಗಸ್ಟ್ ತಿಂಗಳ ಕೊನೆಯ ವಾರ ಪ್ರತಿದಿನ ಸರಾಸರಿ 80 ಲಕ್ಷ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಹಬ್ಬಗಳ ಸಂದರ್ಭದಲ್ಲಿ ಅನಿವಾರ್ಯ ಎನಿಸಿದ್ದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ಮಾತ್ರ ಗುಂಪಿನಲ್ಲಿ ಭಾಗವಹಿಸಬೇಕು ಎಂದು ಎಚ್ಚರಿಕೆ ನೀಡಿದೆ.

ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಒಟ್ಟಾರೇ 18.38 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಈ ತಿಂಗಳ ಕಳೆದ ವಾರ ಪ್ರತಿದಿನ 80 ಲಕ್ಷ ಲಸಿಕೆ ಹಾಕುವುದರೊಂದಿಗೆ ಎರಡು ದಿನಗಳಲ್ಲಿ ದೈನಂದಿನ ಲಸಿಕೆ ನೀಡಿಕೆ ಸಂಖ್ಯೆ 1 ಕೋಟಿ ದಾಟಿದೆ.

ಆಗಸ್ಟ್ ತಿಂಗಳಲ್ಲಿ ಸರಾಸರಿ ಪ್ರತಿದಿನ 59.29 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿನಲ್ಲಿ ಪ್ರತಿದಿನ ಸುಮಾರು 70-75 ಲಕ್ಷ ಡೋಸ್ ಲಸಿಕೆ ಹಾಕುವ ಭರವಸೆಯಲ್ಲಿ ಸರ್ಕಾರವಿದೆ. ಗುರುವಾರ ಬೆಳಗ್ಗೆಯವರೆಗೆ ಸುಮಾರು 64.65 ಕೋಟಿ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪೂರೈಸಿದೆ. ಈ ಪೈಕಿ ಸುಮಾರು 5 ಕೋಟಿ ಬಳಕೆಯಾದ ಲಸಿಕೆ ಇನ್ನೂ ರಾಜ್ಯಗಳಲ್ಲಿ ಲಭ್ಯವಿದೆ.

ಉತ್ತರ ಪ್ರದೇಶ, ಬಿಹಾರದಂತಹ ದೊಡ್ಡ ರಾಜ್ಯಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಲಾಗಿದೆ ಎಂದು ನೀತಿ ಆಯೋಗ ಸದಸ್ಯ ವಿ ಕೆ ಪೌಲ್ ತಿಳಿಸಿದರು. ಪ್ರತಿಯೊಂದು ದೇಶವೂ ತನ್ನ ಜನರು, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸುವ ಗುರಿಯೊಂದಿಗೆ ಕೆಲಸ ಮಾಡುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com